ಕರಾವಳಿಪುತ್ತೂರು

ತಾಯಿ ಕಾಲಿನಿಂದ ಕಚ್ಚಿ ಹಾವಿನ ವಿಷ ತೆಗೆದ ವಿದ್ಯಾರ್ಥಿನಿ! ಪ್ರಾಣ ಉಳಿಸಿದ ಮಗಳಿಗೆ ಪ್ರಶಂಸೆಗಳ ಸುರಿಮಳೆ

336

ನ್ಯೂಸ್‌ನಾಟೌಟ್‌:  ನಾಗರ ಹಾವು ಕಡಿತಕೊಳಗಾದ ಹೆತ್ತ ತಾಯಿಯ ಅಮೂಲ್ಯ ಜೀವವನ್ನು ಮಗಳು ಸಮಯಪ್ರಜ್ಞೆಯಿಂದ ರಕ್ಷಿಸಿದ ಘಟನೆ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದಲ್ಲಿ ನಡೆದಿದೆ.

ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ರೇಂಜರ್ ವಿದ್ಯಾರ್ಥಿನಿ ಶ್ರಮ್ಯ ರೈ ತಮ್ಮ ತಾಯಿಯಾದ ಕೆಯ್ಯೂರು ಗ್ರಾಮ ಪಂಚಾಯತಿ ಸದಸ್ಯೆ ಮಮತ ರೈ ಎಂಬುವರಿಗೆ ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಹಾವೊಂದು ಕಚ್ಚಿತ್ತು.

ಈ ವೇಳೆ ಸಮಯ ಪ್ರಜ್ಞೆಯಿಂದ ಘಟನಾ ಸ್ಥಳಕ್ಕೆ ಧಾವಿಸಿ, ಕಾಲಿಗೆ ಕಚ್ಚಿದ ಹಾವಿನ ವಿಷವನ್ನು ಬಾಯಿಯಲ್ಲಿ ಕಚ್ಚಿ ತೆಗೆದು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ ಎಂದು ವರದಿ ತಿಳಿಸಿದೆ.

ಕೂಡಲೇ ಸ್ಥಳೀಯ ‌ಆಸ್ಪತ್ರೆಗೆ ತಾಯಿಯನ್ನು ಕರೆದೊಯ್ದು ದಾಖಲಿಸಿ, ಚಿಕಿತ್ಸೆ ನೀಡಲಾಗಿದ್ದು, ಮಗಳ ಧೈರ್ಯವನ್ನು ಸ್ಥಳೀಯರು ಮೆಚ್ಚಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈಕೆಯ ಕಾರ್ಯಕ್ಕೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಗಳು ಅಭಿನಂದನೆ ಸಲ್ಲಿಸಿವೆ.

See also  ಸ್ವರ್ಣ ಕಾರ್ಕಳಕ್ಕೆ ಸರ್ವ ಋತುವಿನ ರಸ್ತೆಗಳ ಕೊಡುಗೆ, ನಗರ-ಗ್ರಾಮೀಣ ಪ್ರದೇಶಗಳ ಅಂತರ ತಗ್ಗಿದ್ದು ಹೇಗೆ ಗೊತ್ತಾ..?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget