ಕರಾವಳಿಕ್ರೈಂವೈರಲ್ ನ್ಯೂಸ್

‘ಸೌಜನ್ಯ ಹೆಸರಲ್ಲಿ ದೇಣಿಗೆ ಸಂಗ್ರಹಿಸುವುದಕ್ಕೆ ಅವಕಾಶವಿಲ್ಲ, ಹಣ ಕೇಳುವುದಕ್ಕೆ ಮುಂದಾದ್ರೆ ಗಮನಕ್ಕೆ ತನ್ನಿ’ ಸೌಜನ್ಯ ಮಾವ ವಿಠಲ ಗೌಡ ಹೇಳಿಕೆ

95
Spread the love

ನ್ಯೂಸ್ ನಾಟೌಟ್: ಅತ್ಯಾಚಾರ, ಕೊಲೆಗೀಡಾಗಿ ಸಾವನ್ನಪ್ಪಿದ ಸೌಜನ್ಯ ಹೆಸರಲ್ಲಿ ಇದೀಗ ಕೆಲವರು ದೇಣಿಗೆ ಸಂಗ್ರಹಿಸುತ್ತಿದ್ದಾರೆ ಅನ್ನುವ ಮಾಹಿತಿ ಕೇಳಿ ಬರುತ್ತಿದ್ದು ಯಾರಾದರೂ ಅಂತಹ ಕೆಲಸಕ್ಕೆ ಕೈ ಹಾಕಿದ್ದರೆ ನಮ್ಮ ಗಮನಕ್ಕೆ ತನ್ನಿ ಎಂದು ಸೌಜನ್ಯ ಮಾವ ವಿಠಲ ಗೌಡ ತಿಳಿಸಿದ್ದಾರೆ.

ನ್ಯೂಸ್ ನಾಟೌಟ್ ಜೊತೆಗೆ ಮಾತನಾಡಿದ ವಿಠಲ ಗೌಡ ಅವರು, ‘ಸೌಜನ್ಯ ಹೆಸರಲ್ಲಿ ಯಾರಿಗೂ ದೇಣಿಗೆ ಸಂಗ್ರಹಿಸುವುದಕ್ಕೆ ಅವಕಾಶವಿಲ್ಲ, ಹಣ ಕೇಳುವುದಕ್ಕೆ ಯಾರಾದರೂ ಮುಂದಾದ್ರೆ ನಮ್ಮ ಗಮನಕ್ಕೆ ತನ್ನಿ, ನಮ್ಮ ಹೋರಾಟ ಇರುವುದು ಸೌಜನ್ಯಳಿಗೆ ನ್ಯಾಯ ಸಿಗಬೇಕು ಅನ್ನುವುದಷ್ಟೇ. ಸಾರ್ವಜನಿಕರಿಂದ ಯಾರು ಕೂಡ ಹಣ ಸಂಗ್ರಹಿಸುವುದಕ್ಕೆ ನಾವು ಮುಂದಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸೌಜನ್ಯ ಕುಟುಂಬ ಸಿಬಿಐ ಕೋರ್ಟ್‌ನಲ್ಲಿ ಸಂತೋಷ್ ರಾವ್ ನಿರಪರಾಧಿ ಎಂದು ಘೋಷಣೆ ಬೆನ್ನಲ್ಲೇ ನಿಜವಾದ ಅಪರಾಧಿಗಳಿಗೆ ಶಿಕ್ಷೆ ಕೊಡಬೇಕು ಎಂದು ಕಾನೂನು ಹೋರಾಟ ನಡೆಸುತ್ತಿದೆ. ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರವನ್ನೂ ನೀಡಿದೆ. ನಿವೃತ್ತ ನ್ಯಾಯ ಮೂರ್ತಿಗಳ ಮೂಲಕ ಪ್ರಕರಣದ ಸಂಪೂರ್ಣ ತನಿಖೆ ನಡೆಸಬೇಕು ಅನ್ನುವ ಒತ್ತಾಯವನ್ನೂ ಸೌಜನ್ಯ ಕುಟುಂಬ ಮಾಡಿದೆ.

See also  ಉಡುಪಿ: ಬೈಕ್ ಗೆ ಢಿಕ್ಕಿ ಹೊಡೆದು ಲಾರಿ ಪಲ್ಟಿ..! 6 ಮಂದಿ ಆಸ್ಪತ್ರೆಗೆ ದಾಖಲು..!
  Ad Widget   Ad Widget   Ad Widget   Ad Widget   Ad Widget   Ad Widget