ಕರಾವಳಿರಾಜಕೀಯ

ಸೌಜನ್ಯ ಭೀಕರ ಅತ್ಯಾಚಾರ-ಹತ್ಯೆ ಪ್ರಕರಣ SIT ತನಿಖೆಗೆ? ಶೀಘ್ರದಲ್ಲೇ ಸೌಜನ್ಯ ಕುಟುಂಬ CM ಸಿದ್ದರಾಮಯ್ಯ ಭೇಟಿ ಸಾಧ್ಯತೆ

296

ನ್ಯೂಸ್ ನಾಟೌಟ್: ಧರ್ಮಸ್ಥಳದ ಹುಡುಗಿ ಸೌಜನ್ಯ ಭೀಕರ ಅತ್ಯಾಚಾರ-ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸಬೇಕೆಂದು ಒತ್ತಾಯಿಸಿ ಸೌಜನ್ಯ ಕುಟುಂಬ ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ. ಈ ಬಗ್ಗೆ ನ್ಯೂಸ್ ನಾಟೌಟ್ ಜತೆಗೆ ಮಾತನಾಡಿರುವ ಕುಟುಂಬ ಮೂಲಗಳು ವಿಚಾರವನ್ನು ಸ್ಪಷ್ಟಪಡಿಸಿವೆ.

ಹನ್ನೊಂದು ವರ್ಷಗಳ ಹಿಂದೆ ಧರ್ಮಸ್ಥಳದ ಪಾಂಗಳ ಹುಡುಗಿ ಕಾಲೇಜು ಮುಗಿಸಿ ವಾಪಸ್ ಮನೆಗೆ ಬರುವಾಗ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಈಕೆಗಾಗಿ ಭಾರಿ ಹುಡುಕಾಟ ನಡೆದ ಬಳಿಕ ಧರ್ಮಸ್ಥಳ ಸಮೀಪದ ಕಾಡಿನಲ್ಲಿ ಭೀಕರ ಅತ್ಯಾಚಾರ-ಕೊಲೆಗೀಡಾದ ಸ್ಥಿತಿಯಲ್ಲಿ ಸೌಜನ್ಯಳ ಮೃತದೇಹ ಸಿಕ್ಕಿತ್ತು. ಆ ಬಳಿಕ ಸಂತೋಷ್ ರಾವ್ ಎಂಬಾತನನ್ನು ಬಂಧಿಸಲಾಗಿತ್ತು. ಆತ ಹನ್ನೊಂದು ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ. ಇತ್ತೀಚಿಗೆ ಸಿಬಿಐ ವಿಶೇಷ ನ್ಯಾಯಾಲಯ ಆತ ನಿರಪರಾಧಿ ಎಂದು ಬಿಡುಗಡೆ ಮಾಡಿತ್ತು.

ಸಂತೋಷ್ ರಾವ್ ನಿರಪರಾಧಿ ಅನ್ನುವುದು ಸಾಬೀತಾಗಿದೆ. ಹಾಗಾದರೆ ಇಷ್ಟು ದಿನ ನಿರಪರಾಧಿಯನ್ನು ಅಪರಾಧಿ ಎಂದು ತೋರಿಸಿ, ಸಮಾಜದ ಕಣ್ಣಿಗೆ ಮಣ್ಣೆರೆಚಿದವರು ಯಾರು? ಹಾಗಾದರೆ ನಿಜವಾದ ಅಪರಾಧಿ ಹೊರಗಡೆ ಆರಾಮವಾಗಿ ತಿರುಗಾಡಿಕೊಂಡಿದ್ದಾನೆಯೇ? ಅನ್ನುವಂತಹ ಹಲವು ಅನುಮಾನಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಸೌಜನ್ಯ ಪ್ರಕರಣವನ್ನು ಮರು ತನಿಖೆ ನಡೆಸುವುದಕ್ಕೆ ಸೌಜನ್ಯ ಕುಟುಂಬ ಮುಂದಾಗಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡುವುದಾಗಿ ಮೂಲಗಳು ನ್ಯೂಸ್ ನಾಟೌಟ್‌ ಗೆ ತಿಳಿಸಿವೆ.

ಉದಯ್ ಜೈನ್‌, ಧೀರಜ್‌ ಜೈನ್‌, ಮಲಿಕ್ ಜೈನ್‌ ಎಂಬ ಮೂವರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸೌಜನ್ಯ ಕುಟುಂಬ ಆರೋಪ ಮಾಡಿತ್ತು. ಈ ಬಗ್ಗೆ ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ಉದಯ್ ಜೈನ್‌, ಧೀರಜ್‌ ಜೈನ್‌, ಮಲಿಕ್ ಜೈನ್‌ ನಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇವರಿಗೆ ಮಾಜಿ ಸಚಿವ ಅಭಯ ಚಂದ್ರ ಜೈನ್ ಸಾಥ್ ನೀಡಿದ್ದರು. ಇದೀಗ ಪ್ರಕರಣ ಸತ್ಯದೈವಗಳ ಕ್ಷೇತ್ರವಾದ ಕಾನತ್ತೂರಿನ ಮೆಟ್ಟಿಲವರೆಗೆ ಹೋಗಿದೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸೌಜನ್ಯ ಹತ್ಯೆ ಪ್ರಕರಣ ಮರು ತನಿಖೆ ಆಗಬೇಕು ಅನ್ನುವ ಒತ್ತಾಯ ಕೇಳಿ ಬರುತ್ತಿದೆ. ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗಲೇ ಬೇಕು ಅನ್ನುವ ಕೂಗು ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮರು ತನಿಖೆಗೆ ಆದೇಶ ನೀಡಿದರೂ ಅಚ್ಚರಿ ಇಲ್ಲ. ಆದರೆ ಸೌಜನ್ಯ ಪ್ರಕರಣದಲ್ಲಿ ಎಲ್ಲ ಸಾಕ್ಷಿಗಳನ್ನು ಈಗಾಗಲೇ ನಾಶಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರ ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

See also  ಕಡಬ:ಎಣ್ಣೆ ಹೊಡ್ದು ಬಾರ್ ಮುಂದೆಯೇ ಗಡದ್ ನಿದ್ದೆ,ಗ್ರಾಮಕರಣಿಕನೊಬ್ಬನ ಅಮಲಿನ ಕಥೆ!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget