Latestದೇಶ-ವಿದೇಶರಾಜಕೀಯವಿಡಿಯೋವೈರಲ್ ನ್ಯೂಸ್

ಸೌದಿ ಪ್ರವಾಸದಲ್ಲಿರುವ ಮೋದಿಗೆ ಆಗಸದಲ್ಲಿ ಯುದ್ಧ ವಿಮಾನಗಳಿಂದ ಸ್ವಾಗತ..! ಇಲ್ಲಿದೆ ವಿಡಿಯೋ

831

ನ್ಯೂಸ್‌ ನಾಟೌಟ್‌: ಸೌದಿ ಅರೇಬಿಯಾದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಗೆ ಆಗಸದಲ್ಲಿ ಯುದ್ಧ ವಿಮಾನಗಳ ಮೂಲಕ ಇಂದು(ಎ.22) ಸ್ವಾಗತಕೋರಲಾಗಿದೆ.

ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬೆಳಗ್ಗೆ ಸೌದಿಗೆ ತೆರಳಿದ್ದಾರೆ. ಈ ವೇಳೆ ಸೌದಿಯ ವಾಯುಪ್ರದೇಶವನ್ನು ಪ್ರವೇಶಿಸಿದಾಗ ರಾಯಲ್ ಸೌದಿ ವಾಯುಪಡೆಯ ಎಫ್-15 ವಿಮಾನಗಳು ಅವರ ವಿಮಾನವನ್ನು ಎಸ್ಕಾರ್ಟ್‌ ಮಾಡಿವೆ.

ಸೌದಿ ಅರೇಬಿಯಾಕ್ಕೆ ತೆರಳುವ ಮುನ್ನ ಪ್ರಧಾನಿ ಮೋದಿ, ಭಾರತವು ಸೌದಿ ಅರೇಬಿಯಾದೊಂದಿಗಿನ ದೀರ್ಘ ಮತ್ತು ಐತಿಹಾಸಿಕ ಸಂಬಂಧಗಳನ್ನು ಬಹಳವಾಗಿ ಗೌರವಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಉಭಯ ದೇಶಗಳ ಸಂಬಂಧ ಬಲವಾಗಿದೆ. ರಕ್ಷಣೆ, ವ್ಯಾಪಾರ, ಹೂಡಿಕೆ, ಇಂಧನ ಕ್ಷೇತ್ರಗಳಲ್ಲಿ ಎರಡೂ ದೇಶಗಳು ಪರಸ್ಪರ ಪಾಲುದಾರಿಕೆಯನ್ನು ಅಭಿವೃದ್ಧಿಪಡಿಸಿವೆ ಎಂದು ಹೇಳಿದ್ದಾರೆ.

ಮೊದಲ ಬಾರಿಗೆ ಮೋದಿ ಸೌದಿಯ ಜೆದ್ದಾಗೆ ಭೇಟಿ ನೀಡಿದ್ದಾರೆ. 1982ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜಿದ್ದಾಗೆ ಭೇಟಿ ನೀಡಿದ್ದರು. ಇನ್ನೂ 40 ವರ್ಷಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ಈ ನಗರಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲಾಗಿದೆ.

ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಹಾಗೂ ಮೋದಿಯ ಸಭೆಯಲ್ಲಿ ವ್ಯಾಪಾರ, ಹೂಡಿಕೆ, ಇಂಧನ ಮತ್ತು ರಕ್ಷಣಾ ಸಹಕಾರ, ಪ್ರಾದೇಶಿಕ ಭದ್ರತಾ ಪರಿಸ್ಥಿತಿ ಮತ್ತು ಸಂಪರ್ಕ ಉಪಕ್ರಮಗಳ ಚರ್ಚೆಯಾಗುವ ಸಾಧ್ಯತೆ ಇದೆ.

11 ವರ್ಷದ ಬಾಲಕನ ಹೊಟ್ಟೆಯಲ್ಲಿ 100ಗ್ರಾಂ ಚಿನ್ನದ ಗಟ್ಟಿ..! ಎನಿದು ಘಟನೆ..?

ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ನಡೆದ ಫೈರಿಂಗ್ ಪ್ರಕರಣಕ್ಕೆ ಟ್ವಿಸ್ಟ್ ..! ಜೊತೆಗಿದ್ದವರಿಂದಲೇ ಕೃತ್ಯ..? ಗನ್ ಮ್ಯಾನ್ ಪೊಲೀಸ್ ವಶಕ್ಕೆ..!

ಮಗಳ ಮಾವನ ಜೊತೆ ನಾಲ್ಕು ಮಕ್ಕಳ ತಾಯಿ ಪರಾರಿ..! ದೂರು ದಾಖಲಿಸಿದ ಗಂಡ..!

See also  ಹಲವು ಮಹಿಳೆಯರ ಖಾಸಗಿ ವಿಡಿಯೋ ಮಾಡಿ ಸುಲಿಗೆ..! 9 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget