ಕ್ರೈಂ

ಸರೋಜ್ ಕುಮಾರ್ ಅಪಘಾತ ಪ್ರಕರಣ: ಹುಣಸೂರಿನ ಚಾಲಕ ಅರೆಸ್ಟ್

ಹುಣಸೂರು: ಮೂರು ದಿನಗಳ ಹಿಂದೆ ಬೆಳಗ್ಗೆ ಸಂಪಾಜೆಯಲ್ಲಿ ವಾಕಿಂಗ್ ಹೋಗುತ್ತಿದ್ದ ಸರೋಜ್ ಕುಮಾರ್ ಎಂಬ ವ್ಯಕ್ತಿಗೆ ಗುದ್ದಿ ಸಾವಿಗೆ ಕಾರಣನಾಗಿ ಪರಾರಿಯಾಗಿದ್ದ ಲಾರಿ ಚಾಲಕನನ್ನು ಸುಳ್ಯ ಪೊಲೀಸರು ನಿನ್ನೆ ಅರೆಸ್ಟ್ ಮಾಡಿದ್ದಾರೆ.

ಬಂಧಿತ ಆರೋಪಿಯ ಹೆಸರು ರವಿ ಕುಮಾರ್ , ಆತ ಹುಣಸೂರು ಮೂಲದವನು ಎಂದು ತಿಳಿದು ಬಂದಿದೆ. ಈತ ಚಲಾಯಿಸುತ್ತಿದ್ದ ಈಚರ್ ವಾಹನದ ಬಗ್ಗೆ ಅನುಮಾನಗೊಂಡು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಈತನೇ ಅಪರಾಧಿ ಅನ್ನುವುದು ತಿಳಿದು ಬಂದಿದೆ. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಈತನ ಬಂಧನಕ್ಕೆ ಬಲೆ ಬೀಸಿದ್ದರು. ಈ ಪ್ರಕಾರವಾಗಿ ಆರೋಪಿಯನ್ನು ನಿನ್ನೆ ಹುಣಸೂರಿನಲ್ಲಿ ಬಂಧಿಸಲಾಗಿದೆ ಎನ್ನಲಾಗಿದೆ. ಈಚರ್ ವಾಹನ ಮೈಸೂರಿನದ್ದಾಗಿದ್ದು ಈತ ಅದರಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ. ಸದ್ಯ ಬಂಧನಕ್ಕೆ ಒಳಗಾಗಿರುವ ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ತಿಳಿದು ಬಂದಿದೆ.

Related posts

ಸಂಪಾಜೆ: ನಿಯಂತ್ರಣ ತಪ್ಪಿ ಕಬ್ಬಿನ ಗದ್ದೆಗೆ ನುಗ್ಗಿದ ಕಾರು, ಸ್ವಲ್ಪದರಲ್ಲೇ ತಪ್ಪಿದ ದುರಂತ

ಕುಸ್ತಿ ಒಕ್ಕೂಟ ಮುಖ್ಯಸ್ಥನ ವಿರುದ್ಧ ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಶೋಷಣೆ ಆರೋಪ! ಪ್ರತಿಭಟನೆಗಿಳಿದ ಕುಸ್ತಿಪಟುಗಳು!

ನಟ ದರ್ಶನ್‌ ಗೆ ಆಗಸ್ಟ್‌ 14ರ ವರೆಗೆ ಜೈಲೇ ಗತಿ..! ಅಧಿಕಾರಿಗಳು ಸಲ್ಲಿಸಿದ ರಿಮ್ಯಾಂಡ್ ಅರ್ಜಿಯಲ್ಲಿ ಏನಿತ್ತು..?