ಕ್ರೈಂ

ಸರಳಿಕಟ್ಟೆ ಮನೆಗೆ ನುಗ್ಗಿ 1.20 ಲಕ್ಷ ರೂ. ಹತ್ತು ಪವನ್ ಚಿನ್ನ ದೋಚಿದ ಕಳ್ಳರು

262
Spread the love

ಉಪ್ಪಿನಂಗಡಿ: ಸರಳಿಕಟ್ಟೆ ಮನೆಯೊಂದಕ್ಕೆ ಕಳ್ಳರು ನುಗ್ಗಿದ್ದು ಸುಮಾರು 1.20 ಲಕ್ಷ ರೂ. ಮತ್ತು ಹತ್ತು ಪವನ್ ಚಿನ್ನದೊಂದಿಗೆ ಪರಾರಿಯಾಗಿದ್ದಾರೆ. ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಈ ಘಟನೆ ನಡೆದಿದೆ. ಉಪ್ಪಿನಂಗಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಉಪ್ಪಿನಂಗಡಿ ಸಮೀಪದ ಬಾರ್ಯ ಗ್ರಾಮದ ಸರಳಿಕಟ್ಟೆ ಬೇನಪ್ಪು ನಿವಾಸಿ ಅಬೂಬಕ್ಕರ್ ಮದನಿ ರವರ ಮನೆಗೆ ಕಳ್ಳರು ನುಗ್ಗಿದ್ದು ಇಂದು ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ.ಸ್ಥಳಕ್ಕೆ ಪುತ್ತೂರು ಡಿವೈಎಸ್ಪಿ ಗಾನ .ಪಿ.ಕುಮಾರ್, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಉಪ ನಿರೀಕ್ಷಕ ಕುಮಾರ್ ಸಿ ಕಾಂಬ್ಳೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ. ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿದ್ದಾರೆ.

See also  ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಹಾಲಶ್ರೀ ಸ್ವಾಮೀಜಿಯನ್ನು ಬಂಧಿಸಿ ಬೆಂಗಳೂರಿಗೆ ಕರೆ ತಂದ ಸಿಸಿಬಿ ಪೊಲೀಸರು, ಕಟಕ್ ನಲ್ಲಿ ಟೀ ಶರ್ಟ್ ಹಾಕಿ ಓಡಾಡುತ್ತಿದ್ದ ಸ್ವಾಮೀಜಿಗೆ ಇನ್ಮುಂದೆ ಪೊಲೀಸ್ ಡ್ರಿಲ್..!
  Ad Widget   Ad Widget   Ad Widget