ನ್ಯೂಸ್ ನಾಟೌಟ್: ಇತ್ತೀಚೆಗೆ ಬಾಲಿವುಡ್ ನಟ-ನಟಿಯರು ಕರ್ನಾಟಕದ ದೇವಾಲಯಗಳನ್ನು ಹುಡುಕಿಕೊಂಡು ಬರುತ್ತಿದ್ದಾರೆ. ಶಿಲ್ಪಾ ಶೆಟ್ಟಿ, ಸುನಿಲ್ ಶೆಟ್ಟಿ, ನಟಿ ಕತ್ರಿನಾ ಕೈಫ್, ನೆರೆಯ ರಾಜ್ಯದ ಜೂ ಎನ್ಟಿಆರ್ ಇನ್ನೂ ಕೆಲವು ಪ್ರಮುಖ ನಟ-ನಟಿಯರು ಕರ್ನಾಟಕದ ಕರಾವಳಿ ಭಾಗದ ದೇವಾಲಯಗಳಿಗೆ ಇತ್ತೀಚೆಗೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಭಾಗಿ ಆಗಿದ್ದರು.
ಇದೀಗ ಬಾಲಿವುಡ್ನ ಇನ್ನೊಬ್ಬ ಯುವಟಿಯೊಬ್ಬರು ಕರ್ನಾಟಕದ ಪ್ರಸಿದ್ಧ ದೇವಾಲಯಕ್ಕೆ ಭೇಟಿ ನೀಡಿದ್ದಾರೆ, ಇತರರಂತೆ ಕರಾವಳಿಯ ದೇವಾಲಯದ ಬದಲಿಗೆ ಹುಬ್ಬಳ್ಳಿಯ ಪ್ರಮುಖ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಬಾಲಿವುಡ್ ನ ಸ್ಟಾರ್ ಯುವನಟಿ ಸಾರಾ ಅಲಿ ಖಾನ್ ಹುಬ್ಬಳ್ಳಿಯ ಉಣಕಲ್ ನ ಚಂದ್ರಮೌಳೀಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಸರಳವಾಗಿ ಸೆಲ್ವಾರ್ ಕಮೀಜ್ ತೊಟ್ಟು ದೇವಾಲಯಕ್ಕೆ ಬಂದಿದ್ದ ಸಾರಾ ಅಲಿ ಖಾನ್, ದೇವಾಲಯದ ಆವರಣದಲ್ಲಿ ಕೆಲ ಚಿತ್ರಗಳನ್ನು ತೆಗೆಸಿಕೊಂಡಿದ್ದು, ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಚಂದ್ರಮೌಳೇಶ್ವರ ದೇವಾಲಯ, ಉಣ್ಕಲ್ ಎಂದು ಲೊಕೇಶನ್ ಅನ್ನು ಪಿನ್ ಸಹ ಮಾಡಿದ್ದಾರೆ.
ನಟಿ ಸಾರಾ ಅಲಿ ಖಾನ್ ತಂದೆ ಸೈಫ್ ಅಲಿ ಖಾನ್ ಕೆಲ ವಾರಗಳ ಹಿಂದಷ್ಟೆ ಅಗಂತುಕನೊಬ್ಬನಿಂದ ಚಾಕು ಇರಿತಕ್ಕೆ ಒಳಗಾಗಿದ್ದರು. ಆ ಸಮಯದಲ್ಲಿ ಹೊತ್ತಿದ್ದ ಹರಕೆ ತೀರಿಸಲು ಸಾರಾ ಅಲಿ ಖಾನ್ ಇಷ್ಟು ದೂರ ಚಂದ್ರಮೌಳೇಶ್ವರ ದೇವಾಲಯಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.
10 ಮತ್ತು 12 ವರ್ಷದ ಮಕ್ಕಳ ಜೊತೆ ತಾಯಿ ನೇಣಿಗೆ ಶರಣು..! ಹುಟ್ಟಿನಿಂದಲೇ ಬುದ್ದಿಮಾಂದ್ಯರಾಗಿದ್ದ ಮಕ್ಕಳು..!