Latestವೈರಲ್ ನ್ಯೂಸ್ಸಿನಿಮಾ

ಸಪ್ತಪದಿ ತುಳಿದ ‘ಅಗ್ನಿಸಾಕ್ಷಿ’ ಧಾರವಾಹಿ ಖ್ಯಾತಿಯ ನಟಿ, ವೈಷ್ಣವಿ ಗೌಡ ಮದುವೆಯಲ್ಲಿ ಬೆಳ್ಳಿತೆರೆಯ ಹಲವು ನಟಿಯರು ಭಾಗಿ

551

ನ್ಯೂಸ್ ನಾಟೌಟ್: ಅಗ್ನಿಸಾಕ್ಷಿ ಧಾರಾವಾಹಿಯಿಂದ ಖ್ಯಾತಿ ಪಡೆದ ನಟಿ ವೈಷ್ಣವಿ ಗೌಡ ಸನ್ನಿಧಿ ಎಂಬ ಹೆಸರಿನಿಂದಲೇ ಜನರಿಗೆ ಪರಿಚಯವಾಗಿದ್ದರು.ಕನ್ನಡ ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿಯೂ ಈ ನಟಿಯು ಎಲ್ಲರ ಗಮನ ಸೆಳೆದಿದ್ದರು. ಸೀತಾರಾಮ ಧಾರವಾಹಿಯಲ್ಲೂ ಮುಖ್ಯ ಪಾತ್ರದಲ್ಲಿ ಈ ನಟಿಯು ಮಿಂಚಿರುವ ವೈಷ್ಣವಿ ಗೌಡ ಇದೀಗ ಸಪ್ತಪದಿ ತುಳಿದಿದ್ದಾರೆ.

ನಟಿ ವೈಷ್ಣವಿ ಅನುಕೂಲ್ ಮಿಶ್ರಾ ಜೊತೆ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದಾರೆ. Officially Mr and Mrs ಅಂತ ಕ್ಯಾಪ್ಷನ್‌ ಕೊಟ್ಟು ಫೋಟೋಸ್‌ ಶೇರ್‌ ಮಾಡಿದ್ದಾರೆ. ಹೊರ ರಾಜ್ಯದ ಅನುಕೂಲ್ ಮಿಶ್ರಾ ಏರ್ಪೋರ್ಸ್ ಅಲ್ಲಿ ಕೆಲಸ ಮಾಡುತ್ತಾರೆ. ವೈಷ್ಣವಿ ಗೌಡ ತಾಯಿ ಒಂದು ಸಂದರ್ಶನದಲ್ಲಿ ಒಂದು ಮಾತು ಹೇಳಿದ್ದರು. ನನ್ನ ಮಗನ ಮದುವೆ ಕೊರೊನಾ ಟೈಮ್ ಅಲ್ಲಿಯೇ ಬಂದಿತ್ತು. ಆಗ ಅದ್ದೂರಿಯಾಗಿಯೇ ಮದುವೆ ಮಾಡೋಕೆ ಆಗಲೇ ಇಲ್ಲ. ಆದರೆ, ಮಗಳ ಮದುವೆಯನ್ನ ಸಿಂಪಲ್ ಆಗಿ ಮಾಡೋದೇ ಇಲ್ಲ ಅಂತಲೇ ಹೇಳಿದ್ದರು.ಆ ಪ್ರಕಾರ ಇದೀಗ ವೈಷ್ಣವಿ ಗೌಡ ಮದುವೆ ಅದ್ಧೂರಿಯಾಗಿಯೇ ನಡೆದಿದೆ.

 

View this post on Instagram

 

A post shared by Vaisshnavi (@iamvaishnavioffl)

ಈ ಸಂಬಂಧವು ಮ್ಯಾಟ್ರಿಮೋನಿಯ ಮೂಲಕ ಕೂಡಿ ಬಂದುದಾಗಿದ್ದು, ಮೊದಲಿಗೆ ಇಬ್ಬರ ಕುಟುಂಬದವರು ಮಾತುಕತೆ ನಡೆಸಿ ಒಪ್ಪಿದ ಬಳಿಕ , ಮದುವೆಯ ಮಾತುಕತೆ ಮುಂದುವರಿಸಿದ್ದರು. ಮದುವೆ ಸಮಾರಂಭವು ಒಕ್ಕಲಿಗ ಹಾಗೂ ಉತ್ತರ ಭಾರತದ ಶೈಲಿಯಲ್ಲಿ ನಡೆಯಿತು. ನಟಿ ಅಮೂಲ್ಯ, ಅನುಪಮಾ ಗೌಡ, ನಿವೇದಿತಾ ಗೌಡ, ನಟಿ ಇಶಿತಾ, ನೇಹಾ ಗೌಡ, ನಿರಂಜನ್ ದೇಶಪಾಂಡೆ ಹಾಗೂ ಪತ್ನಿ ಯಶಸ್ವಿನಿ, ನಟ ವಿಜಯ್ ಸೂರ್ಯ ದಂಪತಿ, ನಟಿ ಅಮೂಲ್ಯ ಮದುವೆಯಲ್ಲಿ ಭಾಗಿಯಾಗಿದ್ದರು.  

ಕಾಲ್ತುಳಿತ ಪ್ರಕರಣ: KSCA ಅಧಿಕಾರಿಗಳಿಗೆ ಕರ್ನಾಟಕ ಹೈಕೋರ್ಟ್‌ನಿಂದ ರಿಲೀಫ್..! ಎಫ್ ​ಐಆರ್​ ರದ್ದು ಕೋರಿ ಅರ್ಜಿ ಸಲ್ಲಿಸಿದ್ದ ಅಧಿಕಾರಿಗಳು..!

See also  ಯಾರೀಕೆ ಇಮಾನ್ವಿ ಇಸ್ಮಾಯಿಲ್?ಈಕೆ ಪಾಕಿಸ್ತಾನ ಮೂಲದ ನಟಿಯೇ? ʼಫೌಜಿʼ ಚಿತ್ರದಲ್ಲಿ ನಟ ಪ್ರಭಾಸ್ ಜತೆ ಅಭಿನಯಿಸುತ್ತಿರೋದಕ್ಕೆ ವಿರೋಧ ಏಕೆ?ಏನಿದು ವಿವಾದ?
  Ad Widget   Ad Widget   Ad Widget   Ad Widget   Ad Widget   Ad Widget   Ad Widget