ಕರಾವಳಿ

ಅಂಗಾರೆ ಮಲ್ತಿನ ಕೆಲಸ ಶುಕ್ರವಾರ ಮುಟ್ಟ ಮಾತ್ರ: ಸಂತೋಷ್ ಕಾಮತ್ ವ್ಯಂಗ್ಯ

ಬಳ್ಪ: ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್ ರಾಜ್ಯದಲ್ಲಿಯೇ ನಂಬರ್ ವನ್ ಎನಿಸಿಕೊಂಡ ಆದರ್ಶ ಗ್ರಾಮ ಬಳ್ಪಕ್ಕೆ ಭೇಟಿ ನೀಡಿದರು.

ಬಳಿಕ ಮಾತನಾಡಿದ ಸಂತೋಷ್ ಕಾಮತ್ ಅವರು ಬಳ್ಪವು ಆದರ್ಶ ಗ್ರಾಮದಲ್ಲಿ  ನಂಬರ್ ವನ್ ಎಂದು ಗುರುತಿಸಿಕೊಂಡಿದೆ. ಇಲ್ಲಿನ ಇತಿಹಾಸ ಪ್ರಸಿದ್ಧ ಬೋಗಾಯನಕೆರೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಉತ್ತಮ ಯೋಜನೆ, ಆದರೆ ಇಲ್ಲಿನ ಕಾಮಗಾರಿ ಬಗ್ಗೆ ಅಸಮಾಧಾನವಿದೆ. ಅವೈಜ್ಞಾನಿಕವಾಗಿ ನಡೆಸಲಾಗುತ್ತಿದೆ. ಆದರ್ಶ ಗ್ರಾಮದ ಕೆಲಸಗಳು ಅಚ್ಚುಕಟ್ಟಾಗಿ ನಡೆಯಬೇಕಿತ್ತು. ಈ ಕಾಮಗಾರಿ ನಡೆಸುವಾಗ ಜನರ ತೆರಿಗೆ ಹಣ ದುಂದುವೆಚ್ಚ ಆಗಿರುವುದು  ಕಂಡುಬರುತ್ತದೆ. ಪ್ಲಾನಿಂಗ್ ಇಲ್ಲದೆ ವಿನಿಯೋಗವಾಗುತ್ತಿದೆ. ಕಾಮಗಾರಿ ನಡೆದ ಕೆಲವು ಕಡೆ ಮತ್ತೆ ಕುಸಿತವಾಗಿದೆ. ಅವಶ್ಯಕತೆ ಇಲ್ಲದೆಯೇ ಖರ್ಚಾಗುತ್ತಿದೆಯೇ ಎಂದು ಭಾಸವಾಗುತ್ತಿದೆ.  ಕಾಮಗಾರಿ ಗಮನಿಸಿದರೆ ಅಂಗಾರೆ ಮಲ್ತ್ ನಾ ಕೆಲಸ ಶುಕ್ರವಾರ ಮುಟ್ಟ ಮಾತ್ರ ಎಂಬ ಗಾದೆ ಮಾತಿನಂತಿದೆ ಎಂದು ವ್ಯಂಗ್ಯವಾಡಿದರು.

ಎಎಪಿ ಉಡುಪಿ-ದಕ ಜಿಲ್ಲಾ ವೀಕ್ಷಕ ಅಶೋಕ್ ಎಡಮಲೆ, ಜಿಲ್ಲಾ ಮುಖಂಡರುಗಳಾದ ಅರವಿಂದ್ ಡಿಸೋಜಾ, ಜೆ ಪಿ ರಾವ್ , ವೇಣುಗೋಪಾಲ್, ಪ್ರಸನ್ನ ಭಟ್ ಎಣ್ಮೂರು  ಹಾಗೂ ಎಎಪಿ ತಾಲೂಕು ಕಾರ್ಯದರ್ಶಿ ಗಣೇಶ್ ಪ್ರಸಾದ್ ಕಂದಡ್ಕ, ಪ್ರಮುಖರಾದ ಚೇತನ್ ದೇವಸ್ಯ, ಕಡಬ, ಮೋಹನ್ ದಾಸ ಎಣ್ಣೆಮಜಲು, ಕರುಣಾಕರ ಎಣ್ಣೆಮಜಲು ಉಪಸ್ಥಿತರಿದ್ದರು.

Related posts

ಅಡಿಕೆ ತೋಟಗಳಿಗೆ ನುಗ್ಗಿದ ನೇತ್ರಾವತಿ ನದಿ ನೀರು..! 6 ಕುಟುಂಬಗಳ ಸ್ಥಳಾಂತರ..!

ಹ್ಯಾಕರ್ ಗಳ ವಂಚನೆಗೆ ಸಿಲುಕಿ ತನ್ನದ್ದಲ್ಲದ ತಪ್ಪಿಗೆ ಹೊರದೇಶದಲ್ಲಿ ಬಂಧಿಯಾದ ಕಡಬದ ಯುವಕ: ಮದುವೆ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಭಾರಿ ಆಘಾತ

ವ್ಯಾನಿಟಿ ಬ್ಯಾಗ್ ನಲ್ಲಿ ಬಟ್ಟೆಯೊಳಗೆ ಕಟ್ಟಿದ್ದ ಚಿನ್ನಾಭರಣ ಕಳವು, 4 ಲಕ್ಷ ಮೌಲ್ಯದ ಚಿನ್ನಾಭರಣದೊಂದಿಗೆ ಖತರ್ನಾಕ್ ಕಳ್ಳರು ಎಸ್ಕೇಪ್