ಸುಳ್ಯ

ಸುಳ್ಯ: ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಮಕರ ಸಂಕ್ರಾಂತಿ ಆಚರಣೆ

88

ನ್ಯೂಸ್ ನಾಟೌಟ್: ಸುಳ್ಯದ ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಸೋಮವಾರ ( ಜ.13) ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು. ಮಕರ ಸಂಕ್ರಾಂತಿ ಜನವರಿ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ಒಂದು.

ಸೂರ್ಯನು ದಕ್ಷಿಣ ದಿಕ್ಕಿನಿಂದ ಉತ್ತರದ ಕಡೆಗೆ ಪ್ರಯಾಣ ಬೆಳೆಸಿ ಮಕರ ರಾಶಿಯನ್ನು ಪ್ರವೇಶಿಸಿ ತನ್ನ ಮಗನಾದ ಶನಿ ಮಹಾರಾಜನನ್ನು ಭೇಟಿಯಾಗುವ ದಿನವೇ ಮಕರ ಸಂಕ್ರಾಂತಿ ಎಂದು ಪುಟಾಣಿಗಳಿಗೆ ಕಥೆ ಹೇಳುವುದರ ಮೂಲಕ ಮಕರ ಸಂಕ್ರಾಂತಿಯ ವಿಶೇಷತೆಯನ್ನು ಶಾಲಾ ಸಂಚಾಲಕಿ ಗೀತಾಂಜಲಿ ಟಿ.ಜಿ ತಿಳಿಸಿದರು. ಬಳಿಕ ಎಲ್ಲರೂ ಎಳ್ಳು ಬೆಲ್ಲ ಹಾಗೂ ಪೊಂಗಲ್ ಸವಿದರು. ಅನಂತರ ಮಕ್ಕಳು ಗಾಳಿಪಟ ಹಾರಿಸಿ ಸಂಭ್ರಮಿಸಿದರು. ಈ ಸಂದರ್ಭ ಶಿಕ್ಷಕರಾದ ಲಕ್ಷ್ಮಿಶೆಟ್ಟಿ, ಪ್ರಮೀಳಾ ಹಾಗೂ ಸಹಾಯಕಿಯರಾದ ದೀಕ್ಷಾ ಮತ್ತು ಸುಕನ್ಯಾ ಉಪಸ್ಥಿತರಿದ್ದು ಸಹಕರಿಸಿದರು.

See also  ಸುಳ್ಯ: ಶಾಂತಿ ಕಾಪಾಡಿ ಎಸ್ ಐ ಈರಯ್ಯ ದೊಂತೂರು ಮನವಿ, ಏನಿದು ಸರ್ವ ಧರ್ಮಗಳ ಶಾಂತಿ ಸಭೆ..?
  Ad Widget   Ad Widget   Ad Widget   Ad Widget   Ad Widget   Ad Widget