ನ್ಯೂಸ್ ನಾಟೌಟ್: ಸಂಜಯ್ ದತ್ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳಿಂದ ಗುರುತಿಸಿಕೊಂಡಿದ್ದಾರೆ. ಅವರ ಬೇಡಿಕೆ ದಿನ ಕಳೆದಂತೆ ಹೆಚ್ಚುತ್ತಿದೆ. ಅವರು 135ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 2018ರಲ್ಲಿ ಸಂಜಯ್ ದತ್ ಅವರಿಗೆ ಪೊಲೀಸ್ ಠಾಣೆಯಿಂದ ಕಾಲ್ ಬಂದಿತ್ತು.
ನಿಶಾ ಪಾಟಿಲ್ ಎಂಬ ಅಭಿಮಾನಿ ಅವರ 72 ಕೋಟಿ ರೂಪಾಯಿ ಆಸ್ತಿಯನ್ನು ಸಂಜಯ್ ದತ್ತ್ ಹೆಸರಿಗೆ ಬರೆದಿದ್ದರು. ನಟನಿಗೆ ಎಲ್ಲಾ ಆಸ್ತಿ ನೇರವಾಗಿ ಹಸ್ತಾಂತರ ಆಗಬೇಕು ಎಂದು ಬರೆದಿದ್ದರು. ಇದು ಅನೇಕರಿಗೆ ಅಚ್ಚರಿ ತಂದಿತ್ತು.
ಆದರೆ, ಸಂಜಯ್ ದತ್ ಇದನ್ನು ಸ್ವೀಕರಿಸಿಲ್ಲ. ಅವರ ಲೀಗಲ್ ಟೀಂ ಈ ಬಗ್ಗೆ ಸ್ಪಷ್ಟನೆ ನೀಡಿತ್ತು. ‘ನಿಶಾ ಪಾಟೀಲ್ ಬಗ್ಗೆ ತಿಳಿದಿಲ್ಲ. ನಾನು ಅವರ ಆಸ್ತಿಯನ್ನು ಪಡೆದುಕೊಂಡಿಲ್ಲ’ ಎಂದು ಸಂಜಯ್ ದತ್ ಹೇಳಿದ್ದಾಗಿ ಸ್ಪಷ್ಟನೆ ಸಿಕ್ಕಿತ್ತು. ಈ ವಿಚಾರ ಅನೇಕರಿಗೆ ಶಾಕಿಂಗ್ ಎನಿಸಿತ್ತು. ಇಷ್ಟು ಡೈಹಾರ್ಡ್ ಫ್ಯಾನ್ಸ್ ಇದ್ದಾರಾ ಎಂಬ ವಿಚಾರ ತಿಳಿದು ಅನೇಕರು ಅಚ್ಚರಿಗೊಂಡಿದ್ದರು.
ಸಂಜಯ್ ದತ್ ಅವರು ‘ಕೆಜಿಎಫ್ 2’ ಚಿತ್ರದ ಮೂಲಕ ಕನ್ನಡಕ್ಕೆ ಬಂದರು. ಆ ಬಳಿಕ ದಕ್ಷಿಣ ಭಾರತದಲ್ಲಿ ಅವರಿಗೆ ಹಲವು ವಿಲನ್ ಪಾತ್ರಗಳು ಬಂದವು. ಈಗ ಅವರು ‘ಕೆಡಿ’ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ್ದಾರೆ. ಧ್ರುವ ಸರ್ಜಾ ನಟನೆಯ ಈ ಚಿತ್ರಕ್ಕೆ ಪ್ರೇಮ್ ನಿರ್ದೇಶನ ಇದೆ. ಇದಲ್ಲದೆ, ‘ಭಾಗಿ 4’ ಚಿತ್ರದಲ್ಲೂ ಸಂಜಯ್ ದತ್ ನಟಿಸಿದ್ದು, ಸೆಪ್ಟೆಂಬರ್ 5ರಂದು ಈ ಚಿತ್ರ ತೆರೆಗೆ ಬರಲಿದೆ. ಈ ಚಿತ್ರಕ್ಕೆ ಕನ್ನಡದ ಎ. ಹರ್ಷ ನಿರ್ದೇಶನ ಇದೆ.
Click