ಕರಾವಳಿದೇಶ-ವಿದೇಶವೈರಲ್ ನ್ಯೂಸ್ಸಿನಿಮಾ

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಬಾಲಿವುಡ್ ನಟ ಸಂಜಯ್ ದತ್ ಭೇಟಿ, ಹುಲಿ ಕುಣಿತದ ಪೂಜೆಗೆಂದು ಬಂದಿದ್ದ ನಟ

264

ನ್ಯೂಸ್ ನಾಟೌಟ್: ಬಾಲಿವುಡ್ ನಟ ಸಂಜಯ್ ದತ್ ದಸರಾ ಹಬ್ಬದ ಸಂದರ್ಭದಲ್ಲಿ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನಿನ್ನೆ(ಅ.13) ಭೇಟಿ ನೀಡಿದ್ದಾರೆ.
ನವರಾತ್ರಿ ಪ್ರಯುಕ್ತ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಸಂಜಯ್ ದತ್ ಇದೀಗ ಮಂಗಳೂರಿನ ಕಟೀಲು ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ. ಹುಲಿ ಕುಣಿತದ ಊದು ಪೂಜೆಯಲ್ಲಿ ಸಂಜಯ್ ದತ್ ಭಾಗವಹಿಸಿದ್ದಾರೆ. ಈ ಪೂಜೆಯಲ್ಲಿ ಭಾಗವಹಿಸಲೆಂದೇ ಮುಂಬೈನಿಂದ ಮಂಗಳೂರಿಗೆ ನಟ ಆಗಮಿಸಿದ್ದಾರೆ. ದೇವಸ್ಥಾನದ ವತಿಯಿಂದ ಸಂಜಯ್ ದತ್ ಅವರನ್ನು ದೇವರ ಶೇಷ ವಸ್ತ್ರ ಮತ್ತು ಪ್ರಸಾದ ನೀಡಿ ಗೌರವಿಸಿದರು. ಈ ವೇಳೆ, ಸಂಜಯ್ ದತ್ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದರು.

ಪ್ಯಾನ್ ಇಂಡಿಯಾ ಸಿನಿಮಾಗಳಾದ ಕೆಜಿಎಫ್ 2, ಕೆಡಿ ಸಿನಿಮಾಗಳಲ್ಲಿ ಸಂಜಯ್ ದತ್ ನಟಿಸಿದ ಬಳಿಕ ಕರ್ನಾಟಕ ಮತ್ತು ಕನ್ನಡ ಸಿನಿಮಾಗಳ ಜೊತೆ ಉತ್ತಮ ನಂಟು ಹೊಂದಿದ್ದಾರೆ.

See also  ಪುತ್ತೂರು: ನಕಲಿ ದಾಖಲೆಗಳ ಸರದಾರ ಅರೆಸ್ಟ್‌..! ಸುಳ್ಯ, ಪುತ್ತೂರು ನಗರಸಭೆ ಸೇರಿದಂತೆ ವಿವಿಧ ಗ್ರಾಮ ಪಂಚಾಯತ್‌ಗಳ ನಕಲಿ ದಾಖಲೆಗಳು ವಶಕ್ಕೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget