ಕ್ರೀಡೆ/ಸಿನಿಮಾ

ಅಂದು ಸಾನಿಯಾ – ಮಲಿಕ್ ಮದುವೆಯಾಗಿದ್ದೇಕೆ? ಈಗ ದೂರ ಆಗ್ತಿರೋದು ಯಾಕೆ?

357

ನ್ಯೂಸ್ ನಾಟೌಟ್: ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮೂಗುತ್ತಿ ಸುಂದರಿ ಎಂದೇ ಟೆನಿಸ್ ಜಗತ್ತಿನಲ್ಲಿ ಖ್ಯಾತಿ ಪಡೆದಿದ್ದಾರೆ. ಆರಂಭದಲ್ಲಿ ಇವರ ಸೌಂದರ್ಯಕ್ಕೆ ಫಿದಾ ಆಗಿ ಅನೇಕರು ಈಕೆಯ ಹಿಂದೆ ಬಿದ್ದಿದ್ದರು. ಮದುವೆಯಾಗುವಂತೆ ಗಂಟುಬಿದ್ದಿದ್ದರು. ಆದರೆ ಭಾರತದ ಹುಡುಗರ ಪ್ರಪೊಸಲ್ ಗಳನ್ನೆಲ್ಲ ಧಿಕ್ಕರಿಸಿ ಸಾನಿಯಾ ಅಂದು ಪಾಕಿಸ್ತಾನದ ಸೊಸೆಯಾಗಿದ್ದರು. ಪರ-ವಿರೋಧದ ನಡುವೆಯೇ ಆಕೆ ಪಾಕ್‌ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ ಪತ್ನಿಯಾಗಿದ್ದರು. ಕೆಲವು ವರ್ಷದ ಬಳಿಕ ಇಬ್ಬರ ನಡುವೆ ಮುದ್ದಿನ ಮಗನ ಪ್ರವೇಶವಾಗಿತ್ತು. ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಇದೀಗ ಕ್ರೀಡಾ ತಾರೆಯರು ಮಧ್ಯೆ ಬಿರುಕು ಬಿಟ್ಟಿದೆ. ಪರಸ್ಪರ ವಿಚ್ಛೇದನಕ್ಕೆ ಮಟ್ಟಕ್ಕೆ ಬಂದು ತಲುಪಿದೆ. ಸಾನಿಯಾ -ಮಲಿಕ್ ಮದುವೆ 2010 ರಲ್ಲಿ ನಡೆದಿತ್ತು. ಮದುವೆ ಬಳಿಕ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಟೀಕೆಗಳು ನಡೆಯುತ್ತಲೇ ಇತ್ತು. 12 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸುತ್ತಿದ್ದ ಅವರಿಬ್ಬರ ಮದ್ಯೆ ವಿಚ್ಛೇದನದ ಬಿರುಗಾಳಿ ಬೀಸಿದೆ.

ಶೋಯೆಬ್ ಮಲಿಕ್ ಹಾಗೂ ಸಾನಿಯಾ ಮಿರ್ಜಾ ಲವ್ ಮಾಡಿ ಮದುವೆಯಾಗಿ ವೈವಾಹಿಕ ಸಂಬಂಧ ನಡೆಸುತ್ತಿದ್ದರು. ಆದರೆ ಶೋಯೆಬ್ ಪಾಕಿಸ್ತಾನದ ನಟಿ ಜೊತೆ ಪರಸ್ಪರ ಸಂಬಂಧ ಹೊಂದಿರುವುದು ಕೇಳಿ ಬರುತ್ತಿದೆ. ಆಕೆಯ ಜೊತೆ ಡೇಟಿಂಗ್ ಮಾಡುವುದು ಸಹ ಸುದ್ದಿಯಾಗಿದೆ. ಈ ವಿಚಾರ ಸಾನಿಯಾ ಮಿರ್ಜಾ ಕೇಳಿದ ಬಳಿಕ ವಿಚ್ಛೇದನ ಪತ್ರಕ್ಕೆ ಸಹಿ ಹಾಕಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ವಿಚ್ಛೇದನಕ್ಕೆ ಅಂತಿಮ ಹಂತದ ತಯಾರಿ ನಡೆದಿವೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಪ್ರಸ್ತುತ ಸಾನಿಯ ದುಬೈನಲ್ಲಿ ತನ್ನ ಮಗುವಿನ ಜೊತೆ ಜೀವನ ನಡೆಸುತ್ತಿದ್ದಾರೆ. ಜತೆಗೆ ಟೆನಿಸ್ ನತ್ತವೂ ಗಮನ ಹರಿಸಬೇಕಿದೆ. ಅಲ್ಲದೆ ಪುತ್ರ ಇಜಾನ್ ಮಲಿಕ್ ಮಿರ್ಜಾನ ಜವಾಬ್ದಾರಿಯೂ ಆಕೆ ಹೆಗಲ ಮೇಲಿದೆ.

See also  25 ವರ್ಷದೊಳಗಿನವರ ಕ್ರಿಕೆಟ್: ರಾಜ್ಯ ತಂಡಕ್ಕೆ ಶುಭಾಂಗ್ ನಾಯಕ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget