ನ್ಯೂಸ್ ನಾಟೌಟ್: ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಮತ್ತು ರಜತ್ ಕಿಶನ್ ಅವರು ಬಂಧಿಸಲ್ಪಟ್ಟಿದ್ದು ಇದೀಗ ರಿಲೀಸ್ ಆಗಿದ್ದಾರೆ.ಮಾರ್ಚ್ 24 ರಂದು ಬಂಧಿಸಲ್ಪಟ್ಟ ಅವರು, ನೋಟೀಸ್ ನೀಡಿದ ಬಳಿಕ ಅದೇ ದಿನ ರಾತ್ರಿ ಬಿಡುಗಡೆಯಾಗಿದ್ದಾರೆ.
ಬಿಗ್ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಕಿಶನ್ ಅವರು ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು. ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಮಾರ್ಚ್ 24ರ ಬೆಳಿಗ್ಗೆ ಅರೆಸ್ಟ್ ಆಗಿದ್ದ ಅವರು ಅದೇ ದಿನ ರಾತ್ರಿ ಬಿಡುಗಡೆಯಾಗಿದ್ದಾರೆ.ಇಬ್ಬರಿಗೂ ನೋಟಿಸ್ ನೀಡಿ ಬಿಡುಗಡೆ ಮಾಡಲಾಗಿದ್ದು, ಅವರು ಜೈಲಿನಿಂದ ರಿಲೀಸ್ ಆದರೂ ಮತ್ತೆ ವಿಚಾರಣೆಗೆ ಹಾಜರಾಗಬೇಕಿದೆ.
ವಿನಯ್ ಗೌಡ ಹಾಗೂ ರಜತ್ ಅವರು ‘ಬಾಯ್ಸ್ vs ಗರ್ಲ್ಸ್ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಶೋ ಪೂರ್ಣಗೊಂಡ ಬಳಿಕ ಇನ್ಸ್ಟಾ ಗಾಗಿ ಮಚ್ ಅನ್ನು ತೆಗೆದುಕೊಂಡು ರೀಲ್ಸ್ ಮಾಡಿದ್ದಾರೆ. ಇದು ಸೆಟ್ ಪ್ರಾಪರ್ಟಿ ಎಂದು ಕ್ಯಾಪ್ಶನ್ನಲ್ಲಿ ಬರೆಯಲಾಗಿದೆಯಾದರೂ ಅಲ್ಲಿ ಬಳಕೆ ಆಗಿರೋದು ನಿಜವಾದ ಮಚ್ಚು ಎನ್ನುವ ಆರೋಪ ಇತ್ತು. ಈ ಕಾರಣದಿಂದಲೇ ವಿನಯ್ ಹಾಗೂ ರಜತ್ ಅವರನ್ನು ಬಂಧಿಸಿ ವಿಚಾರಣೆ ಮಾಡಲಾಗಿದೆ.ತಡರಾತ್ರಿ ವಿನಯ್ ಹಾಗೂ ರಜತ್ಗೆ ನೋಟಿಸ್ ಕೊಟ್ಟು ಬಿಡುಗಡೆ ಮಾಡಿ ಮನೆಗೆ ಕಳುಹಿಸಲಾಗಿದೆ. ಇಂದು (ಮಾರ್ಚ್ 25) ನಾಳೆ ಬೆಳಗ್ಗೆ 10.30ಕ್ಕೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ. ಸೆಟ್ ಪ್ರಾಪರ್ಟಿ ಎಂದು ರಜತ್ ಹಾಗೂ ವಿನಯ್ ಅವರು ಈ ಮೊದಲೇ ಹೇಳಿದ್ದರು. ಆದರೆ, ಇದನ್ನು ಪೊಲೀಸರು ನಂಬದೇ ಅವರನ್ನು ಬಂಧಿಸಲಾಯಿತು. ಈಗ ಮಚ್ಚನ್ನು ಪೊಲೀಸರಿಗೆ ನೀಡಲಾಗಿದೆ. ಈಗ ಮಚ್ಚು ಪರಿಶೀಲಿಸಿದ ಬಳಿಕ ಅದನ್ನು ಫೈಬರ್ ಮಚ್ಚು ಎಂದು ಪೊಲೀಸರು ಒಪ್ಪಿಕೊಂಡಿದ್ದಾರೆ ಎಂದು ವರದಿ ಆಗಿದೆ.