Latestಕ್ರೈಂಬೆಂಗಳೂರುರಾಜ್ಯಸಿನಿಮಾ

ಖ್ಯಾತ ಸ್ಯಾಂಡಲ್ ವುಡ್ ನಿರ್ದೇಶಕ ನಂದಕಿಶೋರ್ ವಿರುದ್ಧ ಫಿಲ್ಮ್ ಚೇಂಬರ್‌ ಗೆ ದೂರು..? ಕಿಚ್ಚ ಸುದೀಪ್ ಹೆಸರಲ್ಲಿ 22 ಲಕ್ಷ ವಂಚನೆ ಆರೋಪ..!

629

ನ್ಯೂಸ್ ನಾಟೌಟ್: ಕಿಚ್ಚ ಸುದೀಪ್ ಹೆಸರು ಹೇಳಿಕೊಂಡು ವಂಚಿಸಿದ ಆರೋಪದ ಮೇಲೆ ನಿರ್ದೇಶಕ ನಂದಕಿಶೋರ್ ವಿರುದ್ಧ ಇಂದು(ಜೂ.23) ನಟ ಶಬರೀಶ್ಶೆಟ್ಟಿ ಫಿಲ್ಮ್ ಚೇಂಬರ್‌ ಗೆ ದೂರು ಕೊಡಲು ಮುಂದಾಗಿದ್ದಾರೆ.

ಸಿನಿಮಾದಲ್ಲಿ ಅವಕಾಶ ಕೊಡೋದಾಗಿ 22 ಲಕ್ಷ ರೂ. ಹಣ ವಂಚಿಸಿ ಸಿನಿಮಾವನ್ನೂ ಮಾಡದೇ, ಅವಕಾಶವನ್ನೂ ಕೊಡದೆ ಖ್ಯಾತ ನಿರ್ದೇಶಕ ನಂದಕಿಶೋರ್ ವಂಚಿಸಿದ್ದಾರೆ ಎಂದು ಇತ್ತೀಚೆಗೆ ನಟ ಶಬರೀಶ್ ಶೆಟ್ಟಿ ಆರೋಪ ಮಾಡಿದ್ದರು. ಇದೀಗ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಕರ್ನಾಟಕದ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಂದಕಿಶೋರ್ ವಿರುದ್ಧ ದೂರು ನೀಡಲು ಶಬರೀಶ್ ಮುಂದಾಗಿದ್ದಾರೆ.

ನಟ ಶಬರೀಶ್ ಜಿಮ್‍ ನಲ್ಲಿ ನಿರ್ದೇಶಕ ನಂದಕೀಶೋರ್‌ ಅವರನ್ನು ಭೇಟಿಯಾದ ಬಳಿಕ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಬಳಿಕ ಹಂತಹಂತವಾಗಿ ನಂದಕಿಶೋರ್ 22 ಲಕ್ಷ ರೂ. ವರೆಗೆ ಹಣ ಪಡೆದಿದ್ದಾರೆ. ಈಗ ಹಣ ವಾಪಸ್ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಶಬರೀಶ್ ಶೆಟ್ಟಿ ಆರೋಪಿಸಿದ್ದಾರೆ.

ಕೆಸಿಸಿ ಕ್ರಿಕೆಟ್ ಟೂರ್ನಮೆಂಟ್‍ನ ಆಟಗಾರನೂ ಆಗಿದ್ದ ಶಬರೀಶ್ ನಂದಕಿಶೋರ್ ಮಧ್ಯಸ್ಥಿಕೆಯಲ್ಲಿ ಕಿಚ್ಚ ಸುದೀಪ್‍ ರನ್ನು ಭೇಟಿ ಮಾಡಲು ಆಸೆ ಪಟ್ಟಿದ್ದರಂತೆ. ಇನ್ನೂ, ಸುದೀಪ್ ಹೆಸರನ್ನ ಹೇಳಿಕೊಂಡು ವಂಚಿಸಿದ್ದ ಆರೋಪ ಹೊತ್ತಿರುವ ನಂದಕೀಶೋರ್ ಮೇಲೆ ಇದೀಗ ಶಬರೀಶ್ ದೂರು ಕೊಡಲು ಮುಂದಾಗಿದ್ದಾರೆ.

ಪ್ರಮುಖ ತೈಲ ಸಾಗಾಣೆಯ ಸಮುದ್ರ ಮಾರ್ಗವನ್ನು ಮುಚ್ಚಲು ಇರಾನ್​ ನಿರ್ಧಾರ..! ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ಆಘಾತ..!

75 ಕೋಟಿ ರೂ. ಸಂಬಳ ತೊರೆದು ಸನ್ಯಾಸಿಯಾದ ರಿಲಯನ್ಸ್ ಉಪಾಧ್ಯಕ್ಷ..! ಜೈನ ಸಂಪ್ರದಾಯದಂತೆ ದೀಕ್ಷೆ..!

See also  ಮಂಗಳಮುಖಿಯರು ಯುವಕನನ್ನು ಕಿಡ್ನಾಪ್ ಮಾಡಿದ್ದೇಕೆ..? ಆತನ ಮರ್ಮಾಂಗವನ್ನೇ ಕತ್ತರಿಸಿ ವಿಕೃತಿ ಮೆರೆಯಲು ಕಾರಣವೇನು? ಏನಿದು ಮಂಗಳಮುಖಿಯರ ಅಮಾನವೀಯ ಕೃತ್ಯ?
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget