ಕರಾವಳಿ

ಮಾನಸಿ ಸುಧೀರ್ ಅಭಿನಯದ ಚಿತ್ರ ಸದ್ಯದಲ್ಲೇ ತೆರೆಗೆ..!ಕಾಂತಾರ ಮೂವಿ ಬಳಿಕ ಇವರು ನಟಿಸಿದ ಆ ಚಿತ್ರದ ಹೆಸರೇನು?

215

ನ್ಯೂಸ್‌ ನಾಟೌಟ್‌: ನ್ಯೂಸ್‌ ನಾಟೌಟ್‌ :ಕೊರೋನಾ ಸಮಯದಲ್ಲಿ ‘ಅಪ್ಪನು ಮಾಡಿದ ಚೌತಿಯ ಪ್ರತಿಮೆಗೆ ಆನೆಯ ಸೊಂಡಿಲಿನ ಮೊಗವಿತ್ತು’ ಎಂದು ಹಾಡಿ ಭಾರಿ ಜನಮೆಚ್ಚುಗೆ ಪಡೆದ ಮಾನಸಿ ಸುಧೀರ್ ಅವರು ಕಾಂತಾರಾ ಸಿನಿಮಾದಲ್ಲಿ ನಾಯಕನ ಅಮ್ಮನಾಗಿ ಅಭಿನಯ ನೀಡಿದ್ದರು. ಇದರ ಬಳಿಕ ಅವರಿಗೆ ಅವಕಾಶಗಳು ಸಾಲು ಸಾಲಾಗಿ ಬಂದವು. ಇದೀಗ ಇವರು ಮತ್ತೊಂದು ಸಿನಿಮಾದಲ್ಲಿ ಕಾಣಿಸಿಕೊಳ್ಳಿದ್ದಾರೆ. 

ಟ್ರೈಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಮಾರ್ಚ್ 1ರಂದು ಹಲವು ಕಥೆಗಳ ‘ಜುಗಲ್ ಬಂದಿ’ ತೆರೆಗೆ ಬರುತ್ತಿದೆ.ಈ ಚಿತ್ರಕ್ಕೆ ದಿವಾಕರ್ ಡಿಂಡಿಮ ಆಕ್ಷನ್ ಕಟ್ ಹೇಳಿದ್ದಾರೆ. ಕಥೆ, ಚಿತ್ರಕಥೆ, ಸಾಹಿತ್ಯ, ನಿರ್ದೇಶನದ ಜೊತೆಗೆ ತಮ್ಮ ಮೊದಲ ಸಿನಿಮಾಗೆ ತಾವೇ ಬಂಡವಾಳ ಕೂಡ ಹೂಡಿರುವುದು ವಿಶೇಷ.ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ ಚಿತ್ರದಲ್ಲಿ ಅರ್ಚನಾ ಕೊಟ್ಟಿಗೆ, ಅಶ್ವಿನ್ ರಾವ್, ಸಂತೋಷ್ ಆಶ್ರಯ್, ಯಶ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಪ್ರಕಾಶ್ ಬೆಳಗಲ್, ಚಂದ್ರಪ್ರಭಾ ಜಿ ಯುವಕ, ರಂಜನ್, ಯುಕ್ತ ಅಲ್ಲು ಸುಶ್ ಒಳಗೊಂಡ ತಾರಾಬಳಗವಿದೆ.

See also  ಸುಳ್ಯ: ಪತ್ರಕರ್ತ ಹಾಗೂ ಮೈ ಜುಂ ಎನಿಸುವ ಅಪಘಾತ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget