ಕರಾವಳಿ

ನಟಿ ಲೀಲಾವತಿ ಅಂತಿಮ ದರ್ಶನ ಪಡೆದ ವಿನೋದ್‌ ರಾಜ್ ಪತ್ನಿ,ಮಗ-ಲೀಲಮ್ಮ ಸೊಸೆ ಎಲ್ಲಿಯವರು?ಮೊಮ್ಮಗ ಈಗ ಏನ್ಮಾಡ್ತಿದ್ದಾರೆ? ಇಲ್ಲಿದೆ ಡಿಟೇಲ್ಸ್..

249

ನ್ಯೂಸ್ ನಾಟೌಟ್ :ಅಗಲಿದ ಹಿರಿಯ ಚೇತನ ಲೀಲಾವತಿ ಅವರ ಅಂತಿಮ ದರ್ಶನಕ್ಕೆ ಚೆನ್ನೈನಿಂದ ಲೀಲಾವತಿ ಅವರ ಸೊಸೆ ಅನು(Anu) ಮತ್ತು ಲೀಲಾವತಿ (Leelavati) ಮೊಮ್ಮಗ  ಯುವರಾಜ್ (Yuvraj) ಆಗಮಿಸಿದ್ದಾರೆ. ನಿನ್ನೆ ರಾತ್ರಿಯೇ ಅವರು ಚೆನ್ನೈನಿಂದ ಹೊರಟು ನೆಲಮಂಗಲ ತಲುಪಿ, ಇಂದು ಅಂತಿಮ ದರ್ಶನ ಪಡೆದಿದ್ದಾರೆ.

ಇತ್ತೀಚೆಗೆ ಲೀಲಾವತಿ ವಯೋಸಹಜ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾಗ ಅವರ ಮೊಮ್ಮಗ ಯುವರಾಜ್ ಮತ್ತು ಸೊಸೆ ಚೆನ್ನೈನಿಂದ ನೋಡಲು ಬಂದಿದ್ದರು. ಅಷ್ಟೊಂದು ದಿನ ಕಣ್ಣುಮುಚ್ಚಿಕೊಂಡೇ ಮಲಗಿರುತ್ತಿದ್ದ ಲೀಲಮ್ಮ ಮೊಮ್ಮಗ ಬಂದು ಅಜ್ಜೀ…ಎಂದು  ಕರೆದಾಗ ಕೂಡಲೇ ಕಣ್ಣು ಬಿಟ್ಟಿದ್ದರೆಂದು ಹೇಳಲಾಗಿತ್ತು.ಅಜ್ಜಿ ಮೊಮ್ಮಗನನ್ನು ತುಂಬಾ ಹಚ್ಚಿಕೊಂಡಿದ್ದರು.

ವಿನೋದ್ ರಾಜ್ (Vinod Raj) ಮದುವೆ ವಿಚಾರವಾಗಿ ಹಲವಾರು ಗೊಂದಲಗಳು ಇದ್ದವು. ತಾಯಿಗಾಗಿ ವಿನೋದ್ ಮದುವೆ ಆಗದೇ, ತಾಯಿಯ ಸೇವೆಯಲ್ಲಿದ್ದಾರೆ ಎಂದು ಹೇಳಲಾಗಿತ್ತು. ಇತ್ತೀಚೆಗಷ್ಟೇ ವಿನೋದ್ ರಾಜ್ ಮದುವೆ ಆಗಿರುವ ಸುದ್ದಿಯನ್ನು ನಿರ್ದೇಶಕರೊಬ್ಬರು ಫೋಟೋ ಸಮೇತ ವಿವರಿಸಿದ್ದು, ಭಾರಿ ವೈರಲ್ ಆಗಿತ್ತು.ಬಳಿಕ ವಿನೋದ್ ರಾಜ್ ಮದುವೆ ವಿಚಾರವನ್ನು ಸ್ವತಃ ಲೀಲಾವತಿ ಮತ್ತು ವಿನೋದ್ ರಾಜ್ ಕೂಡ ಒಪ್ಪಿಕೊಂಡಿದ್ದರು.

ವಿನೋದ್‌ ರಾಜ್‌ ಅವರಿಗೆ ಮದುವೆಯಾಗಿದೆ ಎಂದು ಹೇಳಲಾದ ಹಾಗೂ ಭಾರಿ ಚರ್ಚೆಗೆ ಕಾರಣವಾ ಪೋಸ್ಟ್‌ ಓದಲು ಲಿಂಕ್ ಒತ್ತಿ👇

https://www.facebook.com/prakasharaj.mehu.1/posts/6208265085889118?ref=embed_post

https://www.facebook.com/prakasharaj.mehu.1/posts/6208265085889118?ref=embed_post

ಇನ್ನು ಲೀಲಾವತಿ ಅವರ ಸೊಸೆ ಅನು ತಮಿಳುನಾಡಿನ ಪ್ರತಿಷ್ಠಿತ ಕುಟುಂಬದಲ್ಲಿ ಹುಟ್ಟಿ ಬೆಳೆದಾಕೆ ಐಪಿಎಸ್ ಅಧಿಕಾರಿಯೊಬ್ಬರ ತಂಗಿ ಎನ್ನಲಾಗಿದೆ. ವಿನೋದ್‌ ರಾಜ್‌ ಮಗ ಇದೀಗ ಇಂಜಿನೀಯರಿಂಗ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮಗನ ಮದುವೆಯಾಗಿರುವ ವಿಷಯವನ್ನು ಯಾಕೆ ಇಷ್ಟು ದಿನ ಮುಚ್ಚಿಟ್ಟಿದ್ದೀರಿ? ಅಂತ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಲೀಲಾವತಿ ‘ಯಾಕೆ ಹೇಳಿಲ್ಲ ಅಂದ್ರೆ ಎಂತಹವರ ಮದುವೆ ಎಲ್ಲೊಲ್ಲೂ ನಡೆದಿದೆ. ಪ್ಯಾಲೇಸ್ ಅಲ್ಲಿ ಮಾಡಿದ್ದಾರೆ. ನನಗೆ ಆ ಶಕ್ತಿ ಇರಲಿಲ್ಲ. ಅದಕ್ಕೆ ಅದನ್ನು ರಹಸ್ಯವಾಗಿಡುವುದು ಒಳ್ಳೆಯದು ಅನಿಸಿತು.ನನ್ನ ಮಗನ ಮದುವೆ ಆಗಿದೆ. ಅದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ಆದರೆ, ಸಿಂಪಲ್ ಆಗಿ ಮದುವೆ ಮಾಡಿದೆ. ನನ್ನ ಹತ್ತಿರ ದುಡ್ಡಿಲ್ಲದ್ದಕ್ಕೆ  ತಿರುಪತಿ ಬೆಟ್ಟದ ಮೇಲೆ ಮಾಡಿದೆ ಎಂದು ಹೇಳಿದ್ದರೆನ್ನುವ ವರದಿ ಪ್ರಕಟವಾಗಿತ್ತು.

See also  ಕಲೆಯ ಸಿದ್ದಿಗೆ ತಾಳ್ಮೆ, ಗುರುವಿನ ಪ್ರೋತ್ಸಾಹ ಅಗತ್ಯ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget