Latestಕ್ರೈಂಬೆಂಗಳೂರುಸಿನಿಮಾ

ತೊಡೆಯ ಭಾಗಕ್ಕೆ 14 ಚಿನ್ನದ ಬಿಸ್ಕೆಟ್ ಅಂಟಿಸಿಕೊಂಡಿದ್ರಾ ಸ್ಯಾಂಡಲ್ ವುಡ್ ನಟಿ..? ತನಿಖೆಯಲ್ಲಿ ರಹಸ್ಯ ಮಾಹಿತಿ ಬಯಲು..!

911
Spread the love

ನ್ಯೂಸ್ ನಾಟೌಟ್: ಗೋಲ್ಡ್ ಸ್ಮಗ್ಲಿಂಗ್‌ ಕೇಸ್ ನಲ್ಲಿ ಅರೆಸ್ಟ್ ಆಗಿರುವ ನಟಿ ರನ್ಯಾ ರಾವ್ ಪ್ರಕರಣ ಕುರಿತು ಡಿಆರ್‌ಐ ಅಧಿಕಾರಿಗಳು ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.

ಪ್ರಕರಣ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅಧಿಕಾರಿಗಳು, ಇದು ಇತ್ತೀಚಿಗಿನ ಅತಿ ದೊಡ್ಡ ಭೇಟೆ ಎಂದು ತಿಳಿಸಿದ್ದಾರೆ. ಒಟ್ಟು 17.29 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ. ಏರ್‌ ಪೋರ್ಟ್ ನಲ್ಲಿ 12.56 ಕೋಟಿ ಮೌಲ್ಯದ 14.2 ಕೆಜಿ ಚಿನ್ನ, ಮನೆಯಲ್ಲಿ 2.06 ಕೋಟಿ ಮೌಲ್ಯದ ಚಿನ್ನ, ಬೆಂಗಳೂರಿನ ಮನೆಯಲ್ಲಿ 2.67 ಕೋಟಿ ನಗದು ಹಣ ಸಿಕ್ಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದುಬೈನಿಂದ ಬೆಂಗಳೂರಿನ ಏರ್ ಪೋರ್ಟ್‌ಗೆ ನಟಿ ಬಂದಿದ್ದರು. 1 ಕೆಜಿ ತೂಗುವ 14 ಗೋಲ್ಡ್ ಬಿಸ್ಕೆಟ್ ತಂದಿದ್ದರು. ತೊಡೆಯ ಭಾಗಕ್ಕೆ 14 ಬಿಸ್ಕೆಟ್‌ ಗಳನ್ನು ಗಮ್ ಹಾಕಿ ಅಂಟಿಸಿಕೊಂಡಿದ್ದರು. ಬಳಿಕ ಟೇಪ್ ಅನ್ನು ಬಲವಾಗಿ ಸುತ್ತಿಕೊಂಡಿದ್ದರು. ಟೇಪ್ ಮೇಲೆ ಕ್ರೆಪೆ ಬ್ಯಾಂಡೇಜ್ ಸುತ್ತಿಕೊಂಡಿದ್ದರು. ಯಾವುದೇ ಸ್ಕ್ಯಾನರ್ ಅಲ್ಲಿ ಅನುಮಾನ ಬಾರದಂತೆ ಕ್ರೆಪೆ ಬ್ಯಾಂಡೇಜ್ ಹಾಕಿಕೊಂಡಿದ್ದರು ಎನ್ನಲಾಗಿದೆ. ಇದೆಲ್ಲಾ ಮಾಹಿತಿ ತಿಳಿದಿದ್ದ ಡಿಆರ್‌ಐ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ವಿಟ್ಲ: ಕಲ್ಲು ಕ್ವಾರಿಯಲ್ಲಿ ತಂದಿಟ್ಟಿದ್ದ ಸ್ಪೋಟಕ ಬಿಸಿಲಿನ ಶಾಕಕ್ಕೆ ಸ್ಪೋಟ..! 15 ಮನೆಗಳಿಗೆ ಹಾನಿ, 1ಕಿ.ಮೀ ವರೆಗೆ ಕಂಪಿಸಿದ ಭೂಮಿ..!

See also  ಕಾಂಗ್ರೆಸ್‌ ಕಾರ್ಯಕರ್ತನ ಬರ್ಬರ ಹತ್ಯೆ! ತಲೆಯ ಮೇಲೆ ಸೈಜ್ ಕಲ್ಲು ಎತ್ತಿಹಾಕಿ ಪರಾರಿ!
  Ad Widget   Ad Widget   Ad Widget   Ad Widget