ನ್ಯೂಸ್ ನಾಟೌಟ್: ಡೈರೆಕ್ಟರ್ ಯೋಗರಾಜ್ ಭಟ್ರು ಹಾಡು ಬರೆಯುತ್ತಾರೆ.ಅವರ ಹಾಡುಗಳು ಅಂದ್ರೆ ಅದು ಇಂಟ್ರೆಸ್ಟಿಂಗ್ ಆಗಿಯೇ ಇರುತ್ತೆ. ಆದರೆ, ಯೋಗರಾಜ್ ಭಟ್ರ (Yogaraj Bhat) ವಾಯ್ಸ್ ಚೆನ್ನಾಗಿದೆ. ಅದು ವಾಯ್ಸ್ ಓವರ್‌ಗೆ ಸೂಕ್ತವಾಗಿಯೇ ಇದೆ. ಕೆಲವೊಂದಷ್ಟು ಮೂವಿಗೆ ಇವರು ಧ್ವನಿ ನೀಡಿರೋದ್ರ ಬಗ್ಗೆ ನಿಮ್ಗೆ ಗೊತ್ತಿದೆ. ಹಾಗೇನೆ ಯೋಗರಾಜ್ ಭಟ್ರ ಮಗಳ (Yogaraj Bhat Daughter) ಧ್ವನಿ ಕೂಡ ಚೆನ್ನಾಗಿದೆ. ಅದರ ಝಲಕ್ ಈಗ ಸಿಕ್ಕಿದೆ.
ಹೌದು, ಯೋಗರಾಜ್ ಭಟ್ಟರ ಮಗಳ ವಿಡಿಯೋ ಇದೀಗ ಟ್ರೆಂಡಿಂಗ್ ನಲ್ಲಿದೆ. ಮನದ ಕಡಲು ಚಿತ್ರದ (Manada kadalu movie) ಹಾಡಿನ ಮೂಲಕ ಇದೀಗ ಎಲ್ಲರ ಗಮನ ಸೆಳೆದಿದ್ದಾರೆ. ಮನದ ಕಡಲು ಸಿನಿಮಾದ ವಿಶೇಷ ಹಾಡನ್ನೆ ಭಟ್ರ ಮಗಳು ಪುನರ್ವಸು ಈಗ ಹಾಡಿದ್ದಾರೆ. ತುಂಬಾನೆ ಚೆನ್ನಾಗಿಯೇ ಹಾಡಿದ್ದಾರೆ. ಆ ಒಂದು ವಿಡಿಯೋವನ್ನ ಅಧಿಕೃತವಾಗಿಯೇ ಈಗ ಹಂಚಿಕೊಳ್ಳಲಾಗಿದೆ.
ಯೋಗರಾಜ್ ಭಟ್ರು ಅದ್ಭುತವಾದ ಹಾಡುಗಳನ್ನ ಬರೆಯುತ್ತಾರೆ. ಹಾಡೋರಿಗೂ ಈ ಹಾಡುಗಳು ವಿಶೇಷ ಫೀಲ್ ಕೊಡುತ್ತವೆ. ಹಾಗೆ ಹಿಟ್ ಕೂಡ ಆಗುತ್ತವೆ. ಹಾಗೇನೆ ಇದೀಗ ಮನದ ಕಡಲು ಚಿತ್ರದ ಹಾಡುಗಳು ಹೆಚ್ಚು ಗಮನ ಸೆಳೆಯುತ್ತಿವೆ. ಅದರಲ್ಲೂ ಮನದ ಕಡಲು ಟೈಟಲ್ ಟ್ರ್ಯಾಕ್ ಇಂಟ್ರಸ್ಟಿಂಗ್ ಆಗಿಯೇ ಇದೆ.ಸೋನು ನಿಗಮ್ ಧ್ವನಿಯಲ್ಲಿ ಈ ಹಾಡು ತುಂಬಾನೆ ಚೆನ್ನಾಗಿಯೇ ಮೂಡಿ ಬಂದಿದೆ. ಇದನ್ನ ಕೇಳಿದ ಅನೇಕರು ತುಂಬಾನೆ ಮೆಚ್ಚಿಕೊಂಡಿದ್ದಾರೆ. ರೀಲ್ಸ್ ರೂಪದಲ್ಲೂ ಹಾಡ್ತಿದ್ದಾರೆ ಅಂತಲೂ ಹೇಳಬಹುದು. ಅದೇ ರೀತಿನೇ ಯೋಗರಾಜ್ ಭಟ್ರ ದೊಡ್ಡ ಮಗಳು ಪುನರ್ವಸು ಈಗ ಈ ಒಂದು ಹಾಡು ಹಾಡಿದ್ದಾರೆ.
ಯೋಗರಾಜ್ ಭಟ್ರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ದೊಡ್ಡವಳ ಹೆಸರು ಪುನರ್ವಸು ಅಂತಲೇ ಇದೆ. ವಿಶೇಷ ಹೆಸರಿನ ಪುನರ್ವಸು ಇದೀಗ ಅಪ್ಪನ ಮನದ ಕಡಲು ಚಿತ್ರದ ಟೈಟಲ್ ಟ್ರ್ಯಾಕ್ ಹಾಡಿದ್ದಾರೆ. ತುಂಬಾನೆ ಚೆನ್ನಾಗಿ ಹಾಡಿದ್ದು,ಕೇಳೋಕೆ ಖುಷಿನೂ ಆಗುತ್ತಿದೆ.