ಕರಾವಳಿ

ಅಪ್ಪು ಬಳಿಕ ಸ್ಪಂದನಾ ವಿಜಯ್ ರಾಘವೇಂದ್ರ ಅವರಿಗೂ ಹೃದಯಾಘಾತ!, ದೊಡ್ಮನೆಯಲ್ಲೇ ಇಬ್ಬರ ಬಲಿ ಪಡೆದ ಹಾರ್ಟ್ ಅಟ್ಯಾಕ್!

251

ನ್ಯೂಸ್ ನಾಟೌಟ್ :ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಎನ್ನುವಂಥದ್ದು ಯುವಕರಲ್ಲಿಯೇ ಕಾಣಿಸಿಕೊಳ್ತಾ ಇರೋದು ನಿಜಕ್ಕೂ ಬೇಸರದ ಸಂಗತಿಯಾಗಿದೆ.ನಗು ನಗುತ್ತಾ ಆರಾಮವಾಗಿ ಇರುವವರು ದಿಢೀರ್ ಹೃದಯಾಘಾತವಾಗಿ ಸಾವನ್ನಪ್ಪುವುದು ಅಂದರೆ ನಿಜಕ್ಕೂ ಬೇಸರದ ಸಂಗತಿ.

ಹಾರ್ಟ್ ಅಟ್ಯಾಕ್ ನಿಂದಾಗಿ ಕನ್ನಡ ಚಿತ್ರರಂಗದ ಅನೇಕ ನಟರು ಇಹಲೋಕ ತ್ಯಜಿಸಿದ್ದಾರೆ. ಹೃದಯಾಘಾತ ಬಿಟ್ಟು ಖಿನ್ನತೆ, ಇತರ ಅಂಗಾAಗಗಳ ಸಮಸ್ಯೆ, ಅನಾರೋಗ್ಯಗಳ ಕಾರಣ ಸಾವಿಗೀಡಾದವರೂ ಇದ್ದಾರೆ. ಇದೀಗ ಆ ಸಾಲಿಗೆ ದೊಡ್ಮನೆ ಸೊಸೆ ಸ್ಪಂದನಾ ಕೂಡ ಸೇರಿದ್ದಾರೆ ಎನ್ನುವುದು ನಿಜಕ್ಕೂ ಖೇದಕರ ಸಂಗತಿ. ಬೆಳಗ್ಗೆ ಹೃದಯಾಘಾತಕ್ಕೊಳಗಾದ ಸ್ಪಂದನಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದರು.

ಈಗಾಗಲೇ ಸ್ಯಾಂಡಲ್ ವುಡ್ ಚಿರಂಜೀವಿ ಸರ್ಜಾ,ಜನರ ಪ್ರೀತಿಯ ಅಪ್ಪು ಅಥವಾ ಪುನೀತ್ ರಾಜ್ ಕುಮಾರ್,ಸಂಚಾರಿ ವಿಜಯ್,ಸ್ಪಂದನಾ ವಿಜಯರಾಘವೇಂದ್ರ ಮುಂತಾದವರು ಸಾವಿಗೀಡಾಗಿದ್ದಾರೆ ಎನ್ನುವುದು ಆಘಾತಕಾರಿ ವಿಚಾರ.ಇಷ್ಟು ಸಣ್ಣ ಪ್ರಾಯಕ್ಕೆ ಸಾವನ್ನಪ್ಪುತ್ತಿರುವುದು ಸಿನಿ ಅಭಿಮಾನಿಗಳಲ್ಲಿಯೂ ಬೇಸರವನ್ನು ತಂದಿದೆ.

ಸ್ಪಂದನಾ ವಿಜಯರಾಘವೇಂದ್ರ ಅವರ ಸಾವಾಗುತ್ತಿದ್ದಂತೆ ನೆನಪಾಗೋದು ಪುನೀತ್ ರಾಜ್‌ಕುಮಾರ್ ಅವರ ದುರ್ಮರಣ.ಏಕೆಂದರೆ ಇಬ್ಬರೂ ದೊಡ್ಮನೆಯವರು.ಅಪ್ಪು ಅವರ ನಿಧನ ಕೂಡ ಎಲ್ಲರನ್ನು ಶಾಕ್‌ಗೊಳಗಾಗುವಂತೆ ಮಾಡಿತ್ತು. ಅಪ್ಪು ನಮ್ಮೆಲ್ಲರನ್ನು ತೊರೆದು ಸುಮಾರು ಎರಡು ವರ್ಷಗಳೇ ಕಳೆಯುತ್ತಾ ಬಂದರೂ ಅವರ ನೆನಪು ಮಾತ್ರ ಸದಾ ಕಾಡುತ್ತಲೇ ಇರುತ್ತದೆ. ಅವರು, 2021ರ ಅಕ್ಟೋಬರ್ 29ರಂದು ಮೃತಪಟ್ಟಿದ್ದು ಇಡೀ ರಾಜ್ಯಕ್ಕೇ ಕರಾಳ ದಿನವಾಗಿತ್ತು.

ಅಂದು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಒಮ್ಮೆಲೆ ಎದೆ ನೋವು ಕಾಣಿಸಿಕೊಂಡಿತ್ತು.ತಕ್ಷಣ ಅವರನ್ನು ಆಸ್ಪತ್ರೆಗೆ ಧಾವಿಸಿದರೂ ವೈದ್ಯರಿಂದ ಅಪ್ಪುವನ್ನು ರಕ್ಷಿಸಲು ಸಾಧ್ಯ ಆಗಿರಲಿಲ್ಲ. ಅವರು ಕನ್ನಡಿಗರನ್ನು ಅಗಲಿದಾಗ ಅವರ ವಯಸ್ಸು ಕೇವಲ 46. ಇನ್ನೂ ಬಾಳಿ ಬದುಕಬೇಕಾಗಿದ್ದ ಜೀವ ಅಂದು ಕೊನೆಗೊಂಡಿತ್ತು. ಅವರ ಅಂತಿಮದರ್ಶನಕ್ಕೆ ಸೇರಿದ ಜನಸಂದಣಿಯೇ ಒಂದು ದಾಖಲೆಯಾಗಿ ಹೋಗಿದೆ. ಅವರು ಬಾರದ ಲೋಕಕ್ಕೆ ತೆರಳುವಾಗ ಸಾಲು ಸಾಲು ಸಿನಿಮಾಗಳ ಕೆಲಸ ಕೈಯಲ್ಲಿ ಹಿಡಿದುಕೊಂಡೇ ಇದ್ದರು.ಅಷ್ಟು ಬೇಡಿಕೆಯಿತ್ತು.

See also  ಕಲ್ಲಡ್ಕ: ಶೌಚಾಲಯದ ತ್ಯಾಜ್ಯವನ್ನು ಕೇರಳದಿಂದ ಕರ್ನಾಟಕಕ್ಕೆ ತಂದು ಸುರಿಯುವ ದಂಧೆ..! ದುರ್ನಾತದ ಬೆನ್ನಲ್ಲೇ ಟ್ಯಾಂಕರ್ ಚಾಲಕನ ಬೆನ್ನಟ್ಟಿ ಹಿಡಿದ ಸಾರ್ವಜನಿಕರು
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget