ನ್ಯೂಸ್ ನಾಟೌಟ್: ಕನ್ನಡ ಚಿತ್ರರಂಗ ಹಿರಿಯ ನಟ ಜೈ ಜಗದೀಶ್ ಮತ್ತು ಅವರ ಕುಟುಂಬ ತಮ್ಮ ಹುಟ್ಟೂರಿನಲ್ಲಿ ಭೂತ ಕೋಲ ಆರಾಧನೆ ಮಾಡಿದ್ದಾರೆ. ‘ಈ ವರ್ಷ ಭೂತ ಕೋಲ ಆರಾಧನೆ ಆಯೋಜಿಸುತ್ತಿರುವುದಕ್ಕೆ ಪುಣ್ಯ ಮಾಡಿದ್ದೀವಿ ಎಂದು ಹೇಳಿದ್ದಾರೆ.
ಪತ್ನಿ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಮೂವರು ಪುತ್ರಿಯರಾದ ವೈಭವಿ, ವೈನಿಧಿ ಹಾಗೂ ವೈಸಿರಿ ಭಾಗಿಯಾಗಿದ್ದು,ನಮ್ಮ ಮನೆಯಲ್ಲಿ ಇಷ್ಟೋಂದು ಶಕ್ತಿ ಇರುವ ದೈವಗಳು ಇರುವುದಕ್ಕೆ ಪುಣ್ಯ ಮಾಡಿದ್ದೀವಿ’ ಎಂದು ವೈನಿಧಿ ಬರೆದುಕೊಂಡಿದ್ದಾರೆ. ನಾವು ಅವರ ಕುಟುಂಬದವರು ಅಂದರೆ ತಪ್ಪಾಗದು. ನಿಮ್ಮ ರಕ್ಷಣೆ, ಪ್ರೀತಿ ಮತ್ತು ಮಾರ್ಗದರ್ಶನವನ್ನು ನನ್ನ ಕುಟುಂಬದ ಪ್ರತಿಯೊಬ್ಬರು ಅನುಭವಿಸಿದ್ದಾರೆ. ಇಂತಹ ಅದ್ಭುತವಾದ ಸಂಸ್ಕೃತಿಯನ್ನು ಎದುರಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಎಂದಿದ್ದಾರೆ.