ನ್ಯೂಸ್ ನಾಟೌಟ್: ಸ್ಯಾಂಡಲ್ ವುಡ್‌ನ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ನೋಡೋದಕ್ಕೆ ಫಿಟ್ ಆಗಿ ಕಾಣಿಸುತ್ತಾರೆ. ವಯಸ್ಸು ೬೦ ಪ್ಲಸ್ ಆದರೂ ಇವರ ಎನರ್ಜಿಗೆ ಸರಿ ಸಾಟಿನೇ ಇಲ್ಲ ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿ ಇರುವ ಇವರ ಆರೋಗ್ಯದ ಗುಟ್ಟು ಏನು? ಅಂತ ಕೇಳಿದ್ರೆ ತಮ್ಮ ನೆಚ್ಚಿನ ಬ್ರೂಸ್ ಲೀ ಅಂತ ಆ ಮಾತಿನ ಆಡಿಯೋ ಹಿನ್ನೆಲೆಯಲ್ಲಿಯೇ ಈಗೊಂದು ವಿಡಿಯೋ ಮಾಡಿದ್ದಾರೆ. ಇದರಲ್ಲಿ ಬ್ರೂಸ್ ಲೀ ತರವೇ ಕರಾಟೆ ಅಭ್ಯಾಸ ಮಾಡಿದ್ದಾರೆ.
ಬ್ರೂಸ್ ಲೀ ಎಲ್ಲರಿಗೂ ಸ್ಪೂರ್ತಿನೇ . ಆದರೆ ಕರಾಟೆ ಅಭ್ಯಾಸ ಮಾಡೋರಿಗೆ ಪಂಚ ಪ್ರಾಣವೇ ಬಿಡಿ. ಹಾಗೆ ಅರ್ಜುನ್ ಸರ್ಜಾ ಅವರಿಗೆ ಬ್ರೂಸ್ ಲೀ ಅಂದರೆ ತುಂಬಾನೆ ಇಷ್ಟ ಆಗುತ್ತಾರೆ. ಕಾರಣ, ಅರ್ಜುನ್ ಸರ್ಜಾ ಅವರೂ ಕರಾಟೆ ಕಲಿತುಕೊಂಡಿದ್ದಾರೆ. ಅದನ್ನ ನಿತ್ಯವೂ ಅಭ್ಯಾಸ ಮಾಡುತ್ತಾರೆ.ಆ ಒಂದು ಅಭ್ಯಾಸದ ಫಲವೇ ಅರ್ಜುನ್ ಸರ್ಜಾ ಸಖತ್ ಫಿಟ್ ಆಗಿದ್ದಾರೆ. ವರ್ಕೌಟ್ ಕೂಡ ಮಾಡುತ್ತಾರೆ. ಹಾಗಾಗಿಯೇ ವಯಸ್ಸು ೬೦ ಪ್ಲಸ್ ಆದರೂ ಅದು ಕಾಣಿಸೋದೇ ಇಲ್ಲ. ಇಬ್ಬರು ಹೆಣ್ಣು ಮಕ್ಕಳಿದ್ದರೂ ಅರ್ಜುನ್ ಸರ್ಜಾ ಅವರು ಸಿಕ್ಕಾಪಟ್ಟೆ ಯಂಗ್ ಆಗಿಯೆ ಕಾಣಿಸುತ್ತಾರೆ.
ಈ ಒಂದು ವಿಡಿಯೋ ನೋಡಿದ ಅರ್ಜುನ್ ಸರ್ಜಾ ಫ್ಯಾನ್ಸ್ ತುಂಬಾನೇ ಖುಷಿಪಟ್ಟಿದ್ದಾರೆ. ೩೦ ವರ್ಷದ ಯಂಗ್ ಮ್ಯಾನ್ ಅಂತಲೂ ಬಣ್ಣಿಸಿದ್ದಾರೆ. ಅರ್ಜುನ್ ಸರ್ಜಾ ಕೂಡ ಹಾಗೇನೆ ಇದ್ದಾರೆ. ಅವರಿಗೆ ವಯಸ್ಸೇ ಆಗೋದಿಲ್ಲ ಅನಿಸುತ್ತದೆ. ಆ ರೀತಿನೇ ಅರ್ಜುನ್ ಸರ್ಜಾ ಹೆಲ್ತ್ ಮೆಂಟೇನ್ ಮಾಡಿದ್ದಾರೆ. ಅಷ್ಟೆ ಫಿಟ್ ಆಗಿಯೇ ಕಾಣಿಸಿಕೊಂಡಿದ್ದಾರೆ.
View this post on Instagram