ಕ್ರೈಂರಾಜಕೀಯವೈರಲ್ ನ್ಯೂಸ್

ಈ ಸಂಸದೆ ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದರಾ..? ಸುಪ್ರೀಂ ಕೋರ್ಟ್‌ ವಕೀಲ ನೀಡಿದ ದೂರಿನಲ್ಲೇನಿದೆ? ಇಂದು ವಿಚಾರಣೆಗೆ ಹಾಜರಾಗ್ತಾರಾ..?

262

ನ್ಯೂಸ್ ನಾಟೌಟ್ : ಸಂಸತ್‌ನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಆರೋಪ ಎದುರಿಸುತ್ತಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ನ 2ರಂದು (ಗುರುವಾರ) ಲೋಕಸಭೆಯ ನೈತಿಕ ಸಮಿತಿ ಎದುರು ವಿಚಾರಣೆಗೆ ಹಾಜರಾಗುವ ಬಗ್ಗೆ ಮಾಹಿತಿ ನೀಡಿದ್ದಾರೆ.

” ಸಮಿತಿ ಎದುರು ವಿಚಾರಣೆಗೆ ಹಾಜರಾಗುವೆ. ಅದರ ಜತೆಗೆ ನನ್ನ ವಿರುದ್ಧ ಲಂಚದ ಆರೋಪ ಮಾಡಿರುವ ಸುಪ್ರೀಂ ಕೋರ್ಟ್‌ ವಕೀಲ ಜಯ ಅನಂತ್‌ ದೆಹಾದ್ರಾಯಿಯನ್ನು ಸಮಿತಿ ಎದುರಿಗೇ ಪಾಟಿಸವಾಲಿಗೆ ಗುರಿಪಡಿಸಲು ಒತ್ತಾಯಿಸುವೆ. ಆ ಹಕ್ಕು ನನಗಿಗೆ ಎಂದು ನಂಬಿರುವೆ,” ಎಂದಿದ್ದಾರೆ.

ಲೋಕಸಭೆಯಲ್ಲಿ ಉದ್ಯಮಿ ಗೌತಮ್ ಅದಾನಿ ವಿರುದ್ಧ ಪ್ರಶ್ನೆ ಕೇಳುವುದಕ್ಕೆ ಪ್ರತಿಯಾಗಿ ಭಾರಿ ಮೊತ್ತದ ಹಣ ಹಾಗೂ ದುಬಾರಿ ಉಡುಗೊರೆಗಳನ್ನು ಪಡೆದ ಆರೋಪ ಟಿಎಂಸಿ ಸಂಸದೆ ಎದುರಿಸುತ್ತಿದ್ದು, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮೊಯಿತ್ರಾ ವಿರುದ್ಧ ಮಾಡಿದ ಲಂಚದ ಆರೋಪದ ಬಗ್ಗೆ ನೈತಿಕ ಸಮಿತಿ ತನಿಖೆ ನಡೆಸುತ್ತಿದೆ.

ಸಮಿತಿಯು ಪ್ರಶ್ನೆಗಾಗಿ ಲಂಚ ಪ್ರಕರಣದ ತನಿಖೆ ಮಾಡಲು ಕೇಂದ್ರ ಗೃಹ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಗಳಿಂದ ಸಹಾಯ ಪಡೆದುಕೊಂಡಿದೆ ಮತ್ತು ಅವರಿಂದ ವಿವರಗಳನ್ನು ಪಡೆದಿದೆ ಎಂದು ನಂಬಲಾಗಿದೆ.

ಈ ಸಂಬಂಧ ಲೋಕಸಭೆಯ ನೈತಿಕ ಸಮಿತಿಯು ಈಗಾಗಲೇ ಬಿಜೆಪಿ ನಾಯಕ ನಿಶಿಕಾಂತ್ ದುಬೆ ಮತ್ತು ವಕೀಲ ಜೈ ಅನಂತ್ ದೇಹದ್ರಾಯ್ ಅವರ ಹೇಳಿಕೆ ಪಡೆದಿದ್ದು, ಈಗ ಮಹುವಾ ಮೊಯಿತ್ರಾ ಉತ್ತರ ಪಡೆದಿದೆ.

See also  ಜಮೀರ್ ಮಗ, ಸಿಎಂ ಮೊಮ್ಮಗನಿಗಾಗಿ ವಿಧಾನಸೌಧದಲ್ಲಿ RCB ಕಾರ್ಯಕ್ರಮ ಮಾಡಿದ್ರಾ ಎಂದು ಕೇಳಿದ ಪ್ರತಾಪ್‌ ಸಿಂಹ..! ಕುಂಭಮೇಳದ ಭದ್ರತೆ ಬಗ್ಗೆ ಪಾಠ ಮಾಡಿದವರು ಈಗೆಲ್ಲಿದ್ದೀರಿ ಎಂದ ಮಾಜಿ ಸಂಸದ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget