ರಾಜ್ಯವೈರಲ್ ನ್ಯೂಸ್ಸಿನಿಮಾ

ಯುವ ರಾಜ್​ಕುಮಾರ್ ಪತ್ನಿ ವಿರುದ್ಧ ಮಾನನಷ್ಟ ಅರ್ಜಿ ಸಲ್ಲಿಸಿದ ಸಪ್ತಮಿ ಗೌಡ..! ಶ್ರೀದೇವಿಗೆ ನೋಟಿಸ್ ನೀಡಿದ ಕೋರ್ಟ್..!

ನ್ಯೂಸ್ ನಾಟೌಟ್: ಆರೋಪ ಪ್ರತ್ಯಾರೋಪಗಳ ನಡುವೆ ಯುವರಾಜ್ ಕುಮಾರ್ ಪತ್ನಿ ವಿರುದ್ಧ ಸಪ್ತಮಿಗೌಡ ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಇಂದು(ಜೂ.15) ಶ್ರೀ ದೇವಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿ, ಮುಂದೆ ಅಂತಹ ಹೇಳಿಕೆ ನೀಡದಂತೆ ಕೋರ್ಟ್ ಮೊರೆ ಹೋಗಿದ್ದಾರೆ.

ನಟ ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ವಿಚ್ಛೇದನದ ಸುದ್ದಿ ರಾಜ್ಯದಾದ್ಯಂತ ಸುದ್ದಿಯಾಗಿತ್ತು. ಅಗೌರವ, ಮಾನಸಿಕ ಕ್ರೌರ್ಯದ ಆರೋಪ ಹೊರಿಸಿ ಕೌಟುಂಬಿಕ ನ್ಯಾಯಾಲಯದಲ್ಲಿ ನಟ ಯುವರಾಜ್ ಕುಮಾರ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಬಳಿಕ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದ ಶ್ರೀದೇವಿ, ಪತಿ ಯುವ ವಿರುದ್ಧ ಅಕ್ರಮ ಸಂಬಂಧದ ಆರೋಪ ಮಾಡಿದ್ದರು. ಅಲ್ಲದೆ, ಸಪ್ತಮಿ ಗೌಡ ಹೆಸರನ್ನು ಸಹ ಪ್ರಕರಣದಲ್ಲಿ ಉಲ್ಲೇಖಿಸಿದ್ದರು. ಸಪ್ತಮಿ ಗೌಡ ಹಾಗೂ ಯುವರಾಜ್ ಪರಸ್ಪರ ಸಂಬಂಧದಲ್ಲಿದ್ದಾರೆ. ತಾವು ಅಮೆರಿಕಕ್ಕೆ ತೆರಳಿದಾಗ ಯುವ ಹಾಗೂ ಸಪ್ತಮಿ ಸಜೀವನ ನಡೆಸಿದ್ದಾರೆ ಎಂದು ಶ್ರೀದೇವಿ ಭೈರಪ್ಪ ಆರೋಪ ಮಾಡಿದ್ದರು. ಸಪ್ತಮಿ ಗೌಡ ಅವರಿಗಾಗಿ ನನ್ನನ್ನು ಮನೆಯಿಂದ ಹೊರಗೆ ಹಾಕುವ ಪ್ರಯತ್ನವೂ ನಡೆದಿತ್ತು ಎಂದು ಶ್ರೀದೇವಿ ತಮ್ಮ ವಕೀಲರ ಮೂಲಕ ಆರೋಪ ಮಾಡಿದ್ದರು.

ಇದೀಗ ನಟಿ ಸಪ್ತಮಿ ಗೌಡ, ಶ್ರೀದೇವಿ ಭೈರಪ್ಪ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಂತೆ ಶ್ರೀದೇವಿ ಭೈರಪ್ಪ ವಿರುದ್ಧ ಸಪ್ತಮಿ ಗೌಡ ನಿರ್ಬಂಧಕಾಜ್ಞೆ ನೀಡುವಂತೆ ಕೋರ್ಟ್ ಗೆ ಮನವಿ ಮಾಡಿದ್ದಾರೆ. ತಮ್ಮ ವಿರುದ್ಧ ಶ್ರೀದೇವಿ, ಇಲ್ಲ ಸಲ್ಲದ ಹೇಳಿಕೆ ನೀಡಿದ್ದಾರೆ. ಸುಳ್ಳು ಆರೋಪ ಹೊರಿಸಿದ್ದಾರೆ ಎಂದು ಸಪ್ತಮಿ ಆರೋಪ ಮಾಡಿದ್ದರು, ಈಗ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಿದ್ದಾರೆ. ಇದಕ್ಕೆ ನಿರ್ಭಂದಕಾಜ್ಞೆ ಆದೇಶಿಸಿರುವ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ, ಶ್ರೀದೇವಿ ಭೈರಪ್ಪ ಅವರಿಗೆ ನೊಟೀಸ್ ಜಾರಿ ಮಾಡುವಂತೆ ಆದೇಶ ಮಾಡಿದೆ. ಆದರೆ ಶ್ರೀದೇವಿ ಭೈರಪ್ಪ ಪ್ರಸ್ತುತ ವಿದೇಶದಲ್ಲಿದ್ದಾರೆ ಎನ್ನಲಾಗಿದೆ.

Click 👇

https://newsnotout.com/2024/06/film-chember-issue-banning-darshan-and-visiting
https://newsnotout.com/2024/06/darshan-and-gang-issue-today-future-decisions-have-been-decided
https://newsnotout.com/2024/06/darshan-mb-patil-kannada-news-agriculture-department

Related posts

ಸೇನಾ ಡ್ರೋನ್‌ ದಾಳಿ ಗುರಿ ತಪ್ಪಿದ್ದೇಗೆ..? ತನ್ನದೇ ನೆಲದ 85 ಮಂದಿ ನಾಗರಿಕರ ದುರಂತ ಅಂತ್ಯವಾದದ್ದೆಲ್ಲಿ..?

ಬ್ಯೂಟಿ ಪಾರ್ಲರ್‌ ಗೆ ಹೋಗಿ ಬರುತ್ತೇನೆಂದ ವಧು ಪರಾರಿ..! ಮಂಟಪದಲ್ಲೇ ಕಾದು ಸುಸ್ತಾದ ವರ ಮಾಡಿದ್ದೇನು?

ಗೋಧಿ ಕಟಾವು ಮಷಿನ್‌ ನೊಳಗೆ ಸಿಲುಕಿದ ಬಾಲಕ..! 14ರ ಹುಡುಗನ ದೇಹ ಛಿದ್ರ-ಛಿದ್ರ ..! ಇಲ್ಲಿದೆ ವಿಡಿಯೋ