ಕ್ರೈಂ

ಕಲ್ಲುಗುಂಡಿಯ ಸಂಪತ್ ಕೊಲೆ ಪ್ರಕರಣ: ನಾಲ್ಕನೇ ಆರೋಪಿಗೆ ಜಾಮೀನು

246
Spread the love

ಸುಳ್ಯ: ಕಲ್ಲುಗುಂಡಿಯ ಸಂಪತ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಗಳಲ್ಲಿ ನಾಲ್ಕನೇ ಆರೋಪಿಯಾಗಿ ಗುರುತಿಸಿಕೊಂಡಿದ್ದ ಕಾರ್ತಿಕ್ ಎ.ವಿ.ಯವರಿಗೆ ನ್ಯಾಯಾಲಯ ಜಾಮೀನು ಮಂಜೂರು ಗೊಳಿಸಿದೆ.

ಕಲ್ಲುಗುಂಡಿಯ ಸಂಪತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಅವರಲ್ಲಿ ಈಗಾಗಲೇ ಮೂವರಿಗೆ ಜಾಮೀನು ದೊರೆತಿದ್ದರೆ ಐದು ಮಂದಿ ಜೈಲಿನಲ್ಲಿ ಇದ್ದರು. ಈ ಐದು ಮಂದಿಯಲ್ಲಿ ನಾಲ್ಕನೇ ಆರೋಪಿಯಾಗಿದ್ದ ಕಾರ್ತಿಕ್ ಎ.ವಿ.ಗೆ 5ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮತ್ತು ಸತ್ರ ನ್ಯಾಯಾಲಯ ಪುತ್ತೂರು ಹೈಕೋರ್ಟ್ ಆದೇಶದಂತೆ ಎರಡು ಜನ ಜಾಮೀನುದಾರರನ್ನು ಪಡೆದುಕೊಂಡು ಅಕ್ಟೋಬರ್ 13ರಂದು ಆರೋಪಿಗೆ ಜಾಮೀನು ಮಂಜೂರು ಗೊಳಿಸಿದೆ. ಆರೋಪಿ ಕಾರ್ತಿಕ್ ಎ.ಬಿ. ಯವರ ಪರವಾಗಿ ಬೆಂಗಳೂರಿನ ನ್ಯಾಯವಾದಿಗಳಾದ ರಾಜೇಶ್ ರೈ ಹಾಗೂ ಪುತ್ತೂರಿನ ನ್ಯಾಯವಾದಿ ವಿನಯ್ ಎನ್.ಕೆ. ಸೋಣಂಗೇರಿ ವಾದಿಸಿದ್ದಾರೆ.

See also  15 ವರ್ಷದ ಬಾಲಕಿ ಮೇಲೆ ಬಿದ್ದ ನಿರ್ಮಾಣ ಹಂತದ ಕಟ್ಟಡದಲ್ಲಿ ಸೆಂಟ್ರಿಂಗ್ ಗೆ ಅಳವಡಿಸಿದ್ದ ಮರ..! ತೀವ್ರ ರಕ್ತಸ್ರಾವದಿಂದ ಬಾಲಕಿ ಸಾವು..!
  Ad Widget   Ad Widget   Ad Widget