ಕರಾವಳಿಶಿಕ್ಷಣಸುಳ್ಯ

ಸಂಪಾಜೆಯ ಯುವ ವೈದ್ಯನ ಪ್ರಬಂಧಕ್ಕೆ ಅಮೆರಿಕದಲ್ಲಿ ಪ್ರಥಮ ಸ್ಥಾನ, ಡಾ |ಪುನೀತ್ ಕುಮಾರ್ ಬೊಳುಗಲ್ಲು ಪ್ರಯತ್ನಕ್ಕೆ ಶ್ಲಾಘನೆ

143

ನ್ಯೂಸ್ ನಾಟೌಟ್: ಸಂಪಾಜೆಯ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ, ಬೆಳೆದು ಓದಿದ ಯುವಕ ಇದೀಗ ನಮ್ಮ ನೆಲದ ಕೀರ್ತಿ ಪತಾಕೆಯನ್ನು ವಿದೇಶದಲ್ಲಿ ಹಾರಿಸಿದ್ದಾರೆ. ದೂರದ ಅಮೆರಿಕದಲ್ಲಿ ಡಾ |ಪುನೀತ್ ಕುಮಾರ್ ಬೊಳುಗಲ್ಲು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಪ್ರಥಮ ಸ್ಥಾನ ಲಭಿಸಿದೆ.

ಕೆಲವು ದಿನಗಳ ಹಿಂದೆಯಷ್ಟೇ ಅಮೆರಿಕದ ಲೂಸಿಯಾನ ಸ್ಟೇಟ್ ಯೂನಿವರ್ಸಿಟಿಯಲ್ಲಿ ನಡೆದಿರುವ 9ನೇ ವಾರ್ಷಿಕ ರೀಜನಲ್ ಸ್ಟೂಡೆಂಟ್ ಸ್ಕಾಲರ್ಸ್ ಪೋರಮ್ ನಲ್ಲಿ ಡಾ |ಪುನೀತ್ ಕುಮಾರ್ ಬೊಳುಗಲ್ಲು ಅವರು ” Optimizing Forensic Workflows: Crime Scene Documentation With Image Stiching Software” ಎಂಬ ವಿಷಯದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದರು. ಈ ಪ್ರಬಂಧ ಉಳಿದೆಲ್ಲ ಪ್ರಬಂಧಕ್ಕಿಂತಲೂ ಅತ್ಯುತ್ತಮವಾಗಿ ಇದ್ದುದರಿಂದ ಅವರಿಗೆ ಪ್ರಥಮ ಸ್ಥಾನ ಒಲಿದು ಬಂದಿದೆ ಎಂದು ತಿಳಿದು ಬಂದಿದೆ.

ವೈದ್ಯಕೀಯ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಲು ಹೊರಟಿರುವ ಡಾ |ಪುನೀತ್ ಕುಮಾರ್ ಬೊಳುಗಲ್ಲು ಅಮೆರಿಕದ ಅಲ್ಕಾರ್ನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಎಂಎಸ್ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಮಾತ್ರವಲ್ಲ ಪ್ರಥಮ ಸ್ಥಾನಿಯಾಗಿ ಕಾಲೇಜಿನಿಂದ ಹೊರ ಬಂದಿದ್ದರು ಅನ್ನೋದು ವಿಶೇಷ.

ಹುಟ್ಟು ಪ್ರತಿಭಾವಂತರಾಗಿರುವ ಡಾ |ಪುನೀತ್ ಕುಮಾರ್ ಬೊಳುಗಲ್ಲು ಹಲವಾರು ಸಮ್ಮೇಳನಗಳಲ್ಲಿ ಅನೇಕ ಪ್ರಬಂಧಗಳನ್ನು ಮಂಡಿಸಿದ್ದಾರೆ. ಎಂಟು ಬಾರಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅನೇಕ ವಿದ್ಯಾರ್ಥಿಗಳಿಗೂ ಮಾರ್ಗದರ್ಶಕರಾಗಿದ್ದಾರೆ.

ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ, ಬೆಂಗಳೂರಿನ ಬಿಎಂಸಿ ಕಾಲೇಜಿನಲ್ಲಿ ಎಂಡಿ ವ್ಯಾಸಂಗ ಮಾಡಿದ್ದಾರೆ. ಬಳಿಕ ಇದೀಗ ಎಂಎಸ್ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಇವರು ಕಲ್ಲುಗುಂಡಿ ಪೂರ್ಣಿಮಾ ಟೆಕ್ಸ್ ಟೈಲ್ಸ್ ಮಾಲೀಕ ಬಿ.ಆರ್ ಪದ್ಮಯ್ಯ ಮತ್ತು ಶಾರದ ದಂಪತಿಗಳ ಪುತ್ರರಾಗಿದ್ದಾರೆ.

See also  ಸುಳ್ಯ: ಬಸ್‌ನಲ್ಲಿ ಕಳೆದು ಹೋಯ್ತು ಒಡವೆ ,ಪ್ರಾಮಾಣಿಕತೆಯಿಂದ ವಾರೀಸುದಾರರಿಗೆ ಒಪ್ಪಿಸಿದ ನಿರ್ವಾಹಕ
  Ad Widget   Ad Widget     Ad Widget   Ad Widget   Ad Widget   Ad Widget