ಕರಾವಳಿರಾಜಕೀಯರಾಜ್ಯಸುಳ್ಯ

ಮೋದಿಗಾಗಿ ಸಿಂಗಾಪುರದಿಂದ ಹಾರಿ ಬಂದ ಸಂಪಾಜೆಯ ಯುವಕ..! ವಿಶೇಷ ಸಂದರ್ಶನದಲ್ಲಿ ‘ನ್ಯೂಸ್‌ ನಾಟೌಟ್‌’ ಜೊತೆಗೆ ಹೇಳಿದ್ದೇನು..?

ನ್ಯೂಸ್‌ ನಾಟೌಟ್:‌ ದೇಶದೆಲ್ಲೆಡೆ ಮಹಾ ಚುನಾವಣೆ ಭಾರಿ ಗಮನ ಸೆಳೆದಿದೆ. ಕರ್ನಾಟಕದಲ್ಲಿ ಮೊದಲ ಹಂತದ ಲೋಕ ಸಭಾ ಚುನಾವಣೆ ರಾಜ್ಯದ ವಿವಿಧ ಮತಗಟ್ಟೆಯಲ್ಲಿ ಇಂದು ಬೆಳಗ್ಗಿನಿಂದ ಆರಂಭವಾಗಿದೆ. ಅಂತೆಯೇ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮತಗಟ್ಟೆಗಳಲ್ಲೂ ಮತದಾನ ಪ್ರಕ್ರಿಯೆಗೆ ಬಿರುಸಿನ ಚಾಲನೆ ಸಿಕ್ಕಿದೆ. ಅತ್ಯುತ್ಸಾಹದಿಂದ ಮತದಾನ ಮಾಡುವುದಕ್ಕೆ ಜನ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇದೇ ಸಂದರ್ಭದಲ್ಲಿ ದೂರದ ಸಿಂಗಾಪುರದಿಂದ ಬಂದಿರುವ ವ್ಯಕ್ತಿಯೊಬ್ಬರು ಮತದಾನದಲ್ಲಿ ಖುಷಿಯಿಂದಲೇ ಪಾಲ್ಗೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆಯ ನಿರ್ಮಲಚಂದ್ರ ಕಾಡುಪಂಜ ಅವರು ಉದ್ಯೋಗ ನಿಮಿತ್ತ ಸಿಂಗಾಪುರದಲ್ಲಿ ನೆಲೆಸಿದ್ದಾರೆ. ಆದರೆ ಮತದಾನ ಮಾಡುವುದಕ್ಕಾಗಿ ಅವರು ತಮ್ಮ ಹುಟ್ಟೂರಿಗೆ ಓಡೋಡಿ ಬಂದಿದ್ದಾರೆ. ಸಾಮಾನ್ಯವಾಗಿ ಇಲ್ಲಿದ್ದವರೇ ಓಟಿನಲ್ಲಿ ಭಾಗವಹಿಸದೆ ಇರುವುದನ್ನು ನೋಡಿದ್ದೇವೆ. ಅಂತಹವರಿಗೆ ಸಂಪಾಜೆಯ ನಿರ್ಮಲಚಂದ್ರ ಕಾಡುಪಂಜ ಅವರು ಸ್ಪೂರ್ತಿಯಾಗಿದ್ದಾರೆ. ಊರಿಗೆ ಬಂದಿರುವ ನಿರ್ಮಲಚಂದ್ರ ಕಾಡುಪಂಜ ಅವರು ನ್ಯೂಸ್‌ ನಾಟೌಟ್‌ ಜೊತೆಗೆ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಯಾವ ಉದ್ದೇಶಕ್ಕಾಗಿ ಊರಿಗೆ ಬಂದಿದ್ದೇನೆ ಅನ್ನುವ ವಿವರವನ್ನು ಹಂಚಿಕೊಂಡಿದ್ದಾರೆ. “ವಿಶ್ವದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದಾಗಿ ಭಾರತೀಯರನ್ನು ಗುರುತಿಸುವಂತಾಗಿದೆ. ಅಂತಹ ಮಹಾನ್‌ ನಾಯಕನಿಗೆ ಓಟು ನೀಡುವ ಹಂಬಲದಿಂದ ನಾನು ಎಷ್ಟು ಖರ್ಚಾದರೂ ಪರವಾಗಿಲ್ಲವೆಂದು ಓಟಿಗೆ ಬಂದಿದ್ದೇನೆ. ವಿದೇಶದಲ್ಲಿ ಜನರು ಭಾರತೀಯರನ್ನು ಭಿಕ್ಷುಕರಂತೆ ನೋಡುವ ಕಾಲವಿತ್ತು. ಆದರೆ ಇಂದಿನ ಟ್ರೆಂಡ್‌ ಬದಲಾಗಿದೆ. ನಮಗೆಲ್ಲರಿಗೂ ಅಲ್ಲಿ ತುಂಬಾ ಗೌರವ ಸಿಗುತ್ತಿದೆ ಎಂದರೆ ಅದಕ್ಕೆ ಮೋದಿಜಿ ಕಾರಣ. ಈ ಹಿಂದೆ ನಾನು ದುಬೈನಲ್ಲಿ ಕೆಲಸ ಮಾಡಿದ್ದೆ. ಕೆಲವು ವರ್ಷಗಳಿಂದ ಸಿಂಗಾಪುರದಲ್ಲಿದ್ದೇನೆ ಎಂದು ತಿಳಿಸಿದರು.
ಮತದಾನ ಪ್ರತಿಯೊಬ್ಬರ ಹಕ್ಕು. ಇಂದಿನ ಚುನಾವಣೆಯಲ್ಲಿ ಎಲ್ಲರೂ ಭಾಗವಹಿಸೋಣ. ಮತ ಚಲಾಯಿಸೋಣ.

Related posts

ಸಂಪಾಜೆ : ಸ್ವಾಮಿ ಕೊರಗಜ್ಜ ಮತ್ತು ಗುಳಿಗ ದೈವದ ನೇಮೋತ್ಸವ ಮತ್ತು ಹರಕೆ ಸೇವೆ ಸಂಪನ್ನ

ವಿಜಯೇಂದ್ರ ನನ್ನನ್ನು ಭೇಟಿಯಾಗೋ ನಾಟಕ ಮಾಡೋದು ಬೇಡ ಎಂದದ್ದೇಕೆ ಯತ್ನಾಳ್ ? ಏನಿದು ರಾಜ್ಯಾಧ್ಯಕ್ಷ ಪಟ್ಟದ ಕಿತ್ತಾಟ..?

ಮಂಗಳೂರು: ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ವಿದ್ಯಾರ್ಥಿಗಳ ಪೋಷಕರಿಗೆ ಪಾಕಿಸ್ತಾನ, ಪೋಲೆಂಡ್ ನಿಂದ ವಾಟ್ಸಾಪ್ ಕರೆ..? ನಿಮ್ಮ ಮಕ್ಕಳನ್ನು ಬಂಧಿಸಿದ್ದೇವೆಂದು ಹಣಕ್ಕಾಗಿ ಬೇಡಿಕೆ ಇಟ್ಟ ಆ ನಿಗೂಢ ವ್ಯಕ್ತಿಗಳು ಯಾರು..?