ಕ್ರೈಂ

ಖ್ಯಾತ ಯಕ್ಷಗಾನ ಕಲಾವಿದನ ಬ್ಯಾನರ್ ಹರಿದು ಹಾಕಿದ ಕಿಡಿಗೇಡಿಗಳು

143
Spread the love

ಕಲ್ಲುಗುಂಡಿ: ಸಂಪಾಜೆಯಲ್ಲಿಂದು ಅದ್ಧೂರಿ ಯಕ್ಷೋತ್ಸವಕ್ಕೆ ಕ್ಷಣಗಣನೆ ನಡೆಯುತ್ತಿದ್ದರೆ ಮತ್ತೊಂದು ಕಡೆ ಖ್ಯಾತ ಯಕ್ಷಗಾನ ಕಲಾವಿದರೊಬ್ಬರ ಬ್ಯಾನರ್ ಅನ್ನು ಕಿಡಿಗೇಡಿಗಳು ಹರಿದು ಹಾಕಿ ಅವಮಾನ ಪಡಿಸಿದ ಘಟನೆ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ನಡೆದಿದೆ.

ಇತ್ತೀಚೆಗೆ ಸಂಪಾಜೆಯ ಹಿರಿಯ ಯಕ್ಷಗಾನ ಕಲಾವಿದರಾದ ಜಯಾನಂದ ಸಂಪಾಜೆ ಯವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಶುಭಾಶಯ ಕೋರಿ ಒಂದಷ್ಟು ಮಂದಿ ಕಲ್ಲುಗುಂಡಿಯ ಮೇಲಿನ ಪೇಟೆಯಲ್ಲಿ ಎರಡು ಬೃಹತ್ ಬ್ಯಾನರ್ ಹಾಕಿದ್ದರು. ಆದರೆ ನಿನ್ನೆ ದಿನ ತಡರಾತ್ರಿ ಆ ಬ್ಯಾನರ್ ಅನ್ನು ಯಾರೋ ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಮತ್ತೊಂದು ಬ್ಯಾನರ್ ಅನ್ನು ಕಿತ್ತು ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಾತನಾಡಿರುವ ಜಯಾನಂದ ಸಂಪಾಜೆಯವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಕಲೆಗೆ ಹಾಗೂ ಯಕ್ಷಗಾನ ಕಲಾವಿದನಿಗೆ ಮಾಡಿದ ಅವಮಾನವಿದು ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

See also  ಶಾಲಾ ಮಕ್ಕಳ ಬ್ಯಾಗನ್ನು ತಲೆಯಡಿ ಇಟ್ಟು ಮಲಗಿದ ಹೆಡ್ ಮಾಸ್ಟರ್! ಈ ಬಗ್ಗೆ ಶಿಕ್ಷಣಾಧಿಕಾರಿ ಹೇಳಿದ್ದೇನು?
  Ad Widget   Ad Widget   Ad Widget   Ad Widget