ಕರಾವಳಿಸುಳ್ಯ

ಸಂಪಾಜೆ: ಬೆಳಗ್ಗೆ ನಗುನಗುತ್ತಲೇ ಮಾತನಾಡಿದ್ದ ವ್ಯಕ್ತಿ ಕತ್ತಲಾಗುವಾಗ ಇನ್ನಿಲ್ಲ..! ಹೃದಯಾಘಾತದಿಂದ ಟೈಲರ್ ಹಠಾತ್ ಸಾವು

163

ನ್ಯೂಸ್ ನಾಟೌಟ್: ಮನುಷ್ಯನ ಜೀವನ ತುಂಬಾ ಸಣ್ಣದು. ನೀರಿನ ಮೇಲಿರುವ ಗುಳ್ಳೆಯಂತೆ. ನಾಲ್ಕು ದಿನದ ಈ ಜೀವನ ಯಾತ್ರೆಯೂ ಯಾವ ಕ್ಷಣದಲ್ಲೂ ಕೊನೆಗೊಳ್ಳಬಹುದು.

ಹೌದು, ಇತ್ತೀಚಿನ ದಿನಗಳಲ್ಲಿ ಮರಣ ಪ್ರಮಾಣ ಹೆಚ್ಚುತ್ತಿದೆ. ಅದರಲ್ಲೂ ಹೃದಯಾಘಾತದಿಂದ ಸಾಯುತ್ತಿರುವ ಜನರ ಸಂಖ್ಯೆಯೇ ಅಧಿಕವಾಗುತ್ತಿದೆ. ಅಂತೆಯೇ ಸಂಪಾಜೆಯ ಕಲ್ಲುಗುಂಡಿಯಲ್ಲಿ ಟೈಲರ್ ಆಗಿದ್ದ ವ್ಯಕ್ತಿಯೊಬ್ಬರು ಕೂಡ ದಿಢೀರ್ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಅಬಿರ ನಾಗೇಶ್ ಮೃತಪಟ್ಟವರು. ಅವರು ಕಳೆದ ಮೂವತ್ತು ವರ್ಷಗಳಿಂದ ಕಲ್ಲುಗುಂಡಿಯ ಬೊಳುಗಲ್ಲು ಪದ್ಮಯ್ಯ ಗೌಡ ಅವರ ಬಟ್ಟೆ ಅಂಗಡಿಯಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದರು. ಮೃತರು ಪತ್ನಿ ಲತಾ, ಪುತ್ರ ಧನುಷ್ , ಪುತ್ರಿ ಜ್ಯೋತಿಯನ್ನು ಅಗಲಿದ್ದಾರೆ. ಎಲ್ಲರೊಂದಿಗೂ ನಗುತ್ತಾ ಬದುಕಿದ್ದ ವ್ಯಕ್ತಿ ದಿಢೀರ್ ಸಾವಿಗೊಳಗಾಗಿದ್ದು ಅಚ್ಚರಿ ತಂದಿದೆ. ಈ ಸಾವು ಅವರ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಪದ್ಮಯ್ಯ ಗೌಡರು ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ.

See also  ಜಾತ್ರೆ ಅಂಗಡಿಗಳಿಗೆ ಶರತ್ ಪಂಪ್ ವೆಲ್ ಕೇಸರಿ ಧ್ವಜ ನೆಟ್ಟದ್ದೇಕೆ? ಕೇಸರಿ ಧ್ವಜ ಹಾಕಿರುವ ಅಂಗಡಿಗಳಲ್ಲಿ ಮಾತ್ರ ವ್ಯಾಪಾರ ಮಾಡಬೇಕೆ? ಇಲ್ಲಿದೆ ವಿಡಿಯೋ
  Ad Widget   Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget