ಕರಾವಳಿಸುಳ್ಯ

ಸಂಪಾಜೆ: ಚಲಿಸುತ್ತಿದ್ದ ವಾಹನದಿಂದ ಹೊರಗೆ ಬಿದ್ದ ಕಾಲೇಜು ಬ್ಯಾಗ್‌..! ವಿದ್ಯಾರ್ಥಿನಿಗೆ ತಲುಪುವ ತನಕ ಶೇರ್ ಮಾಡುವಂತೆ ಮನವಿ

ನ್ಯೂಸ್ ನಾಟೌಟ್: ಚಲಿಸುತ್ತಿದ್ದ ವಾಹನದಿಂದ ಕಾಲೇಜು ಬ್ಯಾಗ್‌ವೊಂದು ರಸ್ತೆಗೆ ಬಿದ್ದ ಘಟನೆ ಶನಿವಾರ ಕೊಡಗು ಸಂಪಾಜೆಯ ಚೆಕ್‌ ಪೋಸ್ಟ್‌ ಸಮೀಪದಿಂದ ವರದಿಯಾಗಿದೆ. ಹಣ, ಹೊಸ ಬಟ್ಟೆ, ಕಾಲೇಜು ಬುಕ್ ವಿದ್ಯಾರ್ಥಿನಿಯೊಬ್ಬರ ಫೋಟೋ ಬ್ಯಾಗ್‌ನ ಒಳಗಡೆ ಇದೆ.

ಕೊಡಗು ಸಂಪಾಜೆಯ ರಿಕ್ಷಾ ಚಾಲಕ ಧನಂಜಯ ಅನ್ನುವವರು ಎಂದಿನಂತೆ ಆಟೋ ಪಾರ್ಕ್ ಮಾಡಿಕೊಂಡು ನಿಂತಿದ್ದರು. ಈ ವೇಳೆ ಒಂದು ಬಸ್ ಹಾಗೂ ಕಾರು ಜೊತೆಜೊತೆಗೆ ಸಂಪಾಜೆಯ ಗೇಟಿನ ಸಮೀಪ ಪಾಸಾಗಿದೆ. ಕಾಲೇಜು ಬ್ಯಾಗ್‌ವೊಂದು ವಾಹನದಿಂದ ರಸ್ತೆಗೆ ಬಿದ್ದಿದೆ. ಅದರಲ್ಲಿ ಹಣ, ಹೊಸಬಟ್ಟೆ, ಕಾಲೇಜು ಬುಕ್‌, ವಿದ್ಯಾರ್ಥಿನಿಯೊಬ್ಬರ ಫೋಟೋ ಸಿಕ್ಕಿದೆ ಎಂದು ಧನಂಜಯ ಅವರು ನ್ಯೂಸ್ ನಾಟೌಟ್‌ಗೆ ತಿಳಿಸಿದ್ದಾರೆ.

ಅದರಲ್ಲಿ ಪುಸ್ತಕವೊಂದು ಲಭಿಸಿದ್ದು ಅದರಲ್ಲಿ SBRR ಮಹಾಜನ ಪ್ರಥಮ ದರ್ಜೆ ಕಾಲೇಜು ಮೈಸೂರು ಎಂದು ಬರೆದುಕೊಂಡಿದೆ. ಮಾತ್ರವಲ್ಲ ರಮ್ಯಶ್ರೀ ಎಂ BBA (ಹೋಟೆಲ್ ಮತ್ತು ಹಾಸ್ಪಿಟಾಲಿಟಿ) ಆರನೇ ಸೆಮಿಸ್ಟರ್‌ ವಿದ್ಯಾರ್ಥಿನಿ ಎಂದು ಬರೆಯಲಾಗಿದೆ. ಯಾರಿಗಾದರೂ ವಿದ್ಯಾರ್ಥಿನಿಯ ಪರಿಚಯ ಇದ್ದರೆ ಅಥವಾ ವಿದ್ಯಾರ್ಥಿನಿಗೆ ಈ ವಿಚಾರ ತಿಳಿದರೆ ಅವರು ತಕ್ಷಣ ಧನಂಜಯ 9164583792 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ ಪಡೆದುಕೊಳ್ಳಲು ಕೋರಲಾಗಿದೆ.

Related posts

ಸುಳ್ಯ ಮೂಲದ ಹೆಡ್ ಕಾನ್ಸ್ಟೇಬಲ್ ಗೆ ಚಿನ್ನದ ಪದಕ, ರಾಷ್ಟ್ರಮಟ್ಟದ ಪೊಲೀಸ್ ಕರ್ತವ್ಯ ಕೂಟಕ್ಕೆ ಆಯ್ಕೆ

ಕುಮಾರಧಾರಾ ನದಿಯಲ್ಲಿ ಅಕ್ರಮ ಮರಳುಗಾರಿಕೆ; ಪೊಲೀಸರ ದಾಳಿ, ಬೋಟ್‌, ಸಹಿತ ಡ್ರೆಜ್ಜಿಂಗ್‌ ಯಂತ್ರ ವಶ

ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ-ಆರೋಪಿ ಬಜಪೆ ಪೊಲೀಸರ ಬಲೆಗೆ