ಸಂಪಾಜೆ (ಕೊಡಗು): ಕೊಡಗು ಸಂಪಾಜೆ ಗ್ರಾಮದ ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಸಂಪಾಜೆ ನಿರ್ವಹಣೆ, ಉದ್ಭವ್ ಸಂಸ್ಥೆ( ರಿ ) ಬೆಂಗಳೂರು ಸಹಯೋಗದೊಂದಿಗೆ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಸದಸ್ಯರು ಹಾಗೂ ಲಯನ್ಸ್ ಕ್ಲಬ್ ಸಂಸ್ಥೆ ಅಧ್ಯಕ್ಷರು ಮತ್ತು ಸದಸ್ಯರು, ಆಸ್ಪತ್ರೆ ಆಡಳಿತಾಧಿಕಾರಿಗಳು, ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ಇದೇ ವೇಳೆ ಉದ್ಭವ್ ಸಂಸ್ಥೆ ಮತ್ತು ಲಯನ್ಸ್ ಸಂಸ್ಥೆ ರೋಗಿಗಳಿಗೆ ಹಣ್ಣು ಮತ್ತು ಸಿಹಿ ಹಂಚಿದರು.
previous post