ಕರಾವಳಿಕೊಡಗು

ಸಂಪಾಜೆ: ಕಲಾ, ವಾಣಿಜ್ಯ ವಿಭಾಗದಲ್ಲಿ ವಿದ್ಯಾರ್ಥಿಗಳ ಕಮಾಲ್..! ಶಿಕ್ಷಕರ ನಿರೀಕ್ಷೆ ಮೀರಿ ಸಾಧನೆ ಮೆರೆದ ವಿದ್ಯಾರ್ಥಿಗಳು

ನ್ಯೂಸ್ ನಾಟೌಟ್ : ರಾಜ್ಯದಾದ್ಯಂತ ಪಿಯುಸಿ ಫಲಿತಾಂಶ ಹೊರಬಿದ್ದಿದೆ. ಅಂತೆಯೇ ಕೊಡಗು ಜಿಲ್ಲೆಯ ಸಂಪಾಜೆ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಕೂಡ ಈ ಸಲ ಅತ್ಯುತ್ತಮ ಫಲಿತಾಂಶವನ್ನು ತಂದುಕೊಟ್ಟಿದ್ದಾರೆ. ಕಲಾ ವಿಭಾಗ ಮತ್ತು ವಾಣಿಜ್ಯ ವಿಭಾಗದಲ್ಲಿ ಕ್ರಮವಾಗಿ ಶಿಕ್ಷಕರ ನಿರೀಕ್ಷೆ ಮೀರಿ ಸಾಧನೆ ತೋರಿರುವುದು ವಿಶೇಷ.

ಕಲಾ ವಿಭಾಗದಲ್ಲಿ ಶೇ. 84.6 ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ. 77.7 ಫಲಿತಾಂಶ ಸಿಕ್ಕಿದೆ. ಎರಡೂ ವಿಭಾಗವನ್ನು ಒಟ್ಟು ಸೇರಿಸಿದಾಗ ಶೇ. 81ರಷ್ಟು ಫಲಿತಾಂಶ ಬಂದಿದೆ ಎಂದು ಕಾಲೇಜು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಕಲಾ ವಿಭಾಗದಲ್ಲಿ ಚರೀಷ್ಮಾ ಕೆ.ಎಸ್ (490), ಅಫ್ರಾಜ್ ಎಂ.ಎಂ (401), ಸಂಶೀರ್ ಇ.ಎಂ (366) ಅಂಕವನ್ನು ಪಡೆದುಕೊಂಡು ಮೊದಲ ಮೂರು ಸ್ಥಾನವನ್ನು ಕ್ರಮವಾಗಿ ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಖದೀಜತ್ ರಂಝೀನ (560) ಉನ್ನತ ಶ್ರೇಣಿ, ಚಸ್ಮಿತ ಕೆ.ಆರ್. (518) ಉನ್ನತ ಶ್ರೇಣಿ ಹಾಗೂ ಪ್ರತೀಕ್ಷಾ (457) ಅಂಕವನ್ನು ಪಡೆದುಕೊಂಡಿದ್ದಾರೆ.

Related posts

ಪ್ರವೀಣ್ ನೆಟ್ಟಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಜೆ.ಪಿ.ನಡ್ಡಾ

ವರದಿಗೆ ತಕ್ಷಣ ಸ್ಪಂದಿಸಿದ ಸಂಪಾಜೆ ಗ್ರಾಮ ಪಂಚಾಯತ್

ಕರಿಕೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ