ಕಲ್ಲುಗುಂಡಿ: ಇಲ್ಲಿನ ಕೊಡಗು ಸಂಪಾಜೆಯ ವ್ಯಕ್ತಿಯೊಬ್ಬರು ಎರ್ನಾಕುಲಂನಲ್ಲಿ ಕಾಣೆಯಾಗಿರುವ ಬಗ್ಗೆ ವರದಿಯಾಗಿದೆ. ಹಂಡನ ಬೆಳ್ಯಪ್ಪ ಎನ್ನುವವರು ನಾಲ್ಕು ದಿನಗಳ ಹಿಂದೆ ಲಾರಿಯೊಂದರಲ್ಲಿ ಎರ್ನಾಕುಲಂಗೆ ತೆರಳಿದ್ದರು. ಅಲ್ಲಿ ಕೆಲಸ ಮುಗಿಸಿದ ಬಳಿಕ ಇವರು ಪ್ರತ್ಯೇಕವಾಗಿ ಸಂಪಾಜೆಗೆ ಹಿಂತಿರುಗಲು ಬಸ್ ಹತ್ತಿದ್ದರು ಎನ್ನಲಾಗಿದೆ. ಆದರೆ ಇದುವರೆಗೆ ಸಂಪಾಜೆಗೆ ವಾಪಸ್ ಆಗಿಲ್ಲದಿರುವುದರಿಂದ ಸಹಜವಾಗಿಯೇ ಮನೆಯವರು ಆತಂಕಕ್ಕೆ ಒಳಗಾಗಿದ್ದಾರೆ. ಸದ್ಯ ನಾಪತ್ತೆಯಾಗಿರುವ ವ್ಯಕ್ತಿಗಾಗಿ ಹುಡುಕಾಟ ನಡೆಯುತ್ತಿದೆ.
previous post