ಕರಾವಳಿಸುಳ್ಯ

ಸಂಪಾಜೆ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಶ್ರೀ ದೇವರ ಕಾಲಾವಧಿ ಜಾತ್ರೆ ಆಮಂತ್ರಣ ಪತ್ರಿಕೆ ಬಿಡುಗಡೆ, ಕೀಲಾರು ಶ್ಯಾಮ್ ಭಟ್ ಸೇರಿದಂತೆ ಗಣ್ಯರು ಭಾಗಿ

ನ್ಯೂಸ್ ನಾಟೌಟ್: ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಶ್ರೀ ದೇವರ ಕಾಲಾವಧಿ ಜಾತ್ರೆಯು ಏ.11 ಮತ್ತು 12 ರಂದು ನಡೆಯಲಿದೆ. ಬ್ರಹ್ಮಶ್ರೀ ನೀಲೇಶ್ವರ ಆರೋತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ, ವೈಧಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

https://newsnotout.com/2024/03/payaswini-river-sampaje/

ಈ ಹಿನ್ನೆಲೆಯಲ್ಲಿ ಭಾನುವಾರ ದೇವಸ್ಥಾನದ ಆವರಣದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿ ಮೊಕ್ತೇಸರ ಎಂ.ಬಿ ಸದಾಶಿವ, ಗೌರವಾಧ್ಯಕ್ಷ ಕೀಲಾರು ರಾಜಾರಾಂ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಶ್ಯಾಮ್ ಭಟ್, ಇಂದಿರಾ ದೇವಿ ಪ್ರಸಾದ್, ಗೋಪಾಲ ಕೃಷ್ಣ ಅಂಬೆಕಲ್ಲು, ಶಿವರಾಮ ಅಂಬೆಕಲ್ಲು, ಕೆದಂಬಾಡಿ ಚಂದ್ರಶೇಖರ್, ಕೊಂದಲಕಾಡು ನಾರಾಯಣ್ ಭಟ್, ಚದ್ಕಾರ್ ಜಯಕುಮಾರ್, ರಾಜಾರಾಂ ಕಳಗಿ, ಕೇಶವ ಚೌಟಾಜೆ ಆಡಳಿತ ಸಮಿತಿ ಪದಾಧಿಕಾರಿಗಳು ಹಾಗೂ ಜೀರ್ಣೋದ್ದಾರ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು. ಕೀಲಾರು ಕುಟುಂಬಸ್ಥರು ಮತ್ತು ದೇವಿ ಪ್ರಸಾದ್ ಕುಟುಂಬಸ್ಥರಿಂದ ಶತರುದ್ರಾಭಿಷೇಕ ಕಾರ್ಯಕ್ರಮ ನಡೆಯಿತು.

Related posts

ಮಂಗಳೂರು: ನಾಳೆ ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮ ಸಂಸ್ಮರಣಾ ದಿನ ಹಾಗೂ ಶೌರ್ಯ ಪ್ರಶಸ್ತಿ ಪ್ರದಾನ

ಹೆಣ್ಣು ಬಾಕ ಜ್ಯೋತಿಷಿ ನರಸಿಂಹ ಪಾಂಗಣ್ಣಾಯನ ಕಾಮ ಪುರಾಣ..!, ವಿವಾಹಿತ ಮಹಿಳೆಯನ್ನೂ ಬಿಡದವ ಈಗ ಪೋಕ್ಸೋ ಪ್ರಕರಣದಲ್ಲಿ ಜೈಲುಪಾಲು

ಮಂಗಳೂರು : ಕಳವಾದ 7 ಮೊಬೈಲ್ ಪೋನ್‌ಗಳು ೨೪ ಗಂಟೆಯೊಳಗೆ ಪತ್ತೆ! ಮೊಬೈಲ್ ಪತ್ತೆಗೆ ಬಂದಿದೆ ಹೊಸ ಪೋರ್ಟಲ್ !