ಭಕ್ತಿಭಾವ

ಸಂಪಾಜೆ: ನೋಡ ಬನ್ನಿ ಶ್ರೀ ಪಂಚಲಿಂಗೇಶ್ವರನ ಕಾಲಾವಧಿ ಜಾತ್ರೆ

329
Spread the love

ಸಂಪಾಜೆ: ಇಲ್ಲಿನ ಕೊಡಗು ಸಂಪಾಜೆಯಲ್ಲಿರುವ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರೆ ಏಪ್ರಿಲ್ 11 ಹಾಗೂ ಏಪ್ರಿಲ್ 12 ರಂದು ಭಕ್ತಾಧಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಲಿದೆ.

ಶ್ರೀ ದೇವರ ಜಾತ್ರೆಯು ಬ್ರಹ್ಮಶ್ರೀ ನೀಲೇಶ್ವರ ಆರೋತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

  • ಬೆಳಗ್ಗೆ ಗಂಟೆ 9.30 ಕ್ಕೆ ಪರಿವಾರ ದೈವಗಳ ತಂಬಿಲ
  • ಬೆಳಗ್ಗೆ ಗಂಟೆ 10ಕ್ಕೆ ಉಗ್ರಾಣ ತುಂಬಿಸುವುದು
  • ಸಂಜೆ ಗಂಟೆ 6-30ಕ್ಕೆ ತಂತ್ರಿಗಳ ಆಗಮನ
  • ಸಂಜೆ ಗಂಟೆ 7-00ಕ್ಕೆ ದೇವತಾ ಪ್ರಾರ್ಥನೆ, ಪಶುದಾನ ಪುಣ್ಯಾಹ ಪ್ರಾಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತುಬಲಿ
  • ರಾತ್ರಿ ಗಂಟೆ 10-೦೦ಕ್ಕೆ ರಂಗಪೂಜೆ, ಪ್ರಸಾದ ವಿತರಣೆ
  • ಬೆಳಗ್ಗೆ 6 ರಿಂದ ಗಣಪತಿ ಹೋಮ, ಬಿಂಬ ಶುದ್ಧಿ, ಕಲಶಪೂಜೆ, ಕಲಶಾಭಿಷೇಕ,
  • ಮಧ್ಯಾಹ್ನ ಗಂಟೆ 12-30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ
  • ರಾತ್ರಿ ಗಂಟೆ 7-00ಕ್ಕೆ ಮಹಾ ಅನ್ನಸಂತರ್ಪಣೆ
  • ರಾತ್ರಿ ಗಂಟೆ 8-00 ರಿಂದ ದೀಪಾರಾಧನೆ, ಹವಿಸುಪೂಜೆ, ಭೂತಬಲಿ, ಶ್ರೀದೇವರ ನೃತ್ಯ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ
See also  ಪುತ್ತೂರು ಮಹಾಲಿಂಗೇಶ್ವರ ದೇಗುಲದಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರಿಂದ ಪ್ರಾರ್ಥನೆ
  Ad Widget   Ad Widget   Ad Widget   Ad Widget   Ad Widget   Ad Widget