Latest

ಸಂಪಾಜೆಯಲ್ಲಿ ರೊಂಯ್ಯಿ ..ರೊಂಯ್ಯಿ ಆಫ್ ರೋಡ್ ..!, ಅಕ್ಷಯ್ ಕೆ.ಸಿ ಸೇರಿದಂತೆ ಗಣ್ಯರು ಭಾಗಿ, ಸಾಹಸಮಯ ಕಾರ್ಯಕ್ರಮಕ್ಕೆ ಚಾಲನೆ

1.1k

ಸಂಪಾಜೆ: ಸಾಮಾನ್ಯವಾಗಿ ಬೆಟ್ಟ ಗುಡ್ಡಗಳ ಕಡಿದಾದ ದಾರಿಯಲ್ಲಿ ಆಫ್ ರೋಡ್ ಅಡ್ವೆಂಚರ್ ಮಾಡುವುದೆಂದರೆ ಯುವಕರಿಗೆ ಎಲ್ಲಿಲ್ಲದ ಸಂಭ್ರಮವಾಗಿರುತ್ತದೆ. ಅಂತಹ ಸಾಹಸಿಗಳ ಸಂಭ್ರಮಕ್ಕೆ ಶನಿವಾರ ಕಲ್ಲುಗುಂಡಿಯ ಸಂಪಾಜೆ ಸಾಕ್ಷಿಯಾಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸುಳ್ಯದ ಯೂತ್ ಐಕಾನ್ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಅವರು, ‘ನಮ್ಮ ಹಳ್ಳಿಯಲ್ಲಿ ಜೀಪ್ ಇರುವವರು ತೋಟದಲ್ಲಿ ಅಲ್ಲಿಲ್ಲಿ ಓಡಿಸುತ್ತೇವೆ. ಇದು ಒಂದು ಕ್ರೀಡೆ ಅನ್ನುವುದು ಎಷ್ಟೋ ಜನರಿಗೆ ಗೊತ್ತಿಲ್ಲ, ಪ್ರಪಂಚದ ಎಷ್ಟೋ ಕಡೆ ಇದು ದೊಡ್ಡ ಕ್ರೀಡೆಯಾಗಿ ಬೆಳೆಯುತ್ತಿದೆ. ದಕ್ಷಿಣ ಭಾರತದಲ್ಲಿ ಅತ್ಯಂತ ಹೆಚ್ಚು ಪ್ರಾಮುಖ್ಯತೆ ಇರುವ ಕ್ರೀಡೆ, ಆಸ್ಟ್ರೇಲಿಯಾದಲ್ಲಿ ಈ ಕ್ರೀಡೆ ಈಗಾಗಲೇ ಹೆಚ್ಚು ಜನಪ್ರಿಯವಾಗಿದೆ. ಇಂತಹ ಕ್ರೀಡೆಯನ್ನು ಆಯೋಜಿಸಿರುವ ಯುವಕರ ಶ್ರಮಕ್ಕೆ ನಿಜವಾಗು ಅಭಿನಂದಿಸಬೇಕು’ ಎಂದು ತಿಳಿಸಿದರು.

 

View this post on Instagram

 

A post shared by News not out (@newsnotout)

ಲಯನ್ಸ್ ಕ್ಲಬ್ ಸಂಪಾಜೆಯ ಪ್ರಶಾಂತ್, ಕೊಡಗು ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅನಂತ ಊರು ಬೈಲು, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು, ವರ್ತಕರ ಸಂಘದ ಅಧ್ಯಕ್ಷ ಯು.ಬಿ. ಚಕ್ರಪಾಣಿ, ಇ.ಪಿ. ರಾಜು ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಸುಮಾರು 10ಕ್ಕೂ ಹೆಚ್ಚು ಆಫ್ ರೋಡ್ ಹವ್ಯಾಸಿಗಳು ಈ ಸಾಹಸಮಯ ರೇಸ್ ನಲ್ಲಿ ಪಾಲ್ಗೊಂಡು ಗಮನ ಸೆಳೆದರು.

See also  ಗ್ರಂಥಾಲಯದಲ್ಲಿ ಓದುತ್ತಿದ್ದ ವ್ಯಕ್ತಿಯ ಮೇಲೆ ಹೋಳಿ ಹಬ್ಬದ ನೆಪದಲ್ಲಿ ದಾಳಿ..! ಬಣ್ಣ ಹಚ್ಚಿಸಿಕೊಳ್ಳಲು ನಿರಾಕರಿಸಿದ ಎಂದು ಯುವಕನ ಬರ್ಬರ ಹತ್ಯೆ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget