ಕರಾವಳಿವೈರಲ್ ನ್ಯೂಸ್

ಸಂಪಾಜೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆವಳುತ್ತಾ ಸಾಗುತ್ತಿರುವ ತಾಯಿ..! ಈಕೆಯ ಕಷ್ಟಕ್ಕೆ ಕೊನೆಯಿಲ್ಲವೇ..?

ನ್ಯೂಸ್ ನಾಟೌಟ್: ಕಳೆದ ಕೆಲವು ದಿನಗಳಿಂದ ವಯಸ್ಸಾದ ತಾಯಿಯೊಬ್ಬರು ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಗಡಿ ಭಾಗವಾದ ಸಂಪಾಜೆ ಬಳಿ ತೆವಳುತ್ತಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿರುವ ದೃಶ್ಯ ಮನಕಲಕುವಂತಿದೆ.

ಈ ವಿಡಿಯೋ ದೃಶ್ಯವನ್ನು ಸಹೃದಯಿ ನ್ಯೂಸ್ ನಾಟೌಟ್ ಓದುಗರೊಬ್ಬರು ನಮ್ಮ ಕಚೇರಿಯ ಮೊಬೈಲ್ ಸಂಖ್ಯೆಗೆ ಕಳಿಸಿಕೊಟ್ಟಿದ್ದಾರೆ. ಈಕೆ ಕಳೆದ ಕೆಲವು ದಿನಗಳಿಂದ ಇದೇ ರೀತಿಯಾಗಿ ರಸ್ತೆಯಲ್ಲಿ ಸಾಗುತ್ತಿದ್ದಾರೆ. ಆಕೆಗೊಂದು ನೆರವು ಬೇಕಿದೆ ಎಂದು ಮನವಿ ಮಾಡಿಕೊಂಡಿದ್ದಾರೆ. ಈಕೆಗೆ ಬಂಧು ಬಳಗ ತಮ್ಮವರು ಅನ್ನುವವರು ಇದ್ದಾರೆಯೇ ಅನ್ನುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಕೆಲವು ದಿನಗಳಿಂದ ಕಂಡು ಬಂದಿದ್ದು ರಸ್ತೆಯಲ್ಲಿ ಸಿಕ್ಕಾಪಟ್ಟೆ ವಾಹನಗಳು ತೆರಳುವುದರಿಂದ ಯಾವುದೇ ಕ್ಷಣದಲ್ಲಿ ಈಕೆಗೆ ಅಪಾಯವಾಗುವ ಸಾಧ್ಯತೆ ಇದೆ. ಸಂಬಂಧಪಟ್ಟ ಪಂಚಾಯತ್, ಅಧಿಕಾರಿಗಳು ಶೀಘ್ರವೇ ಈಕೆಗೊಂದು ನೆಲೆ ಕೊಡುವ ಕೆಲಸವನ್ನು ಮಾಡಿದರೆ ಬಡಪಾಯಿ ಜೀವವನ್ನು ಉಳಿಸಿದಂತಾಗುತ್ತದೆ ಅನ್ನುವುದು ನ್ಯೂಸ್ ನಾಟೌಟ್ ಕಳಕಳಿಯಾಗಿದೆ.

Related posts

Police Bus: ಮಧ್ಯರಾತ್ರಿ ಕಮಿಷನರ್ ಕಚೇರಿ ಆವರಣದಲ್ಲೇ ಬಸ್ ಕದ್ದ ಕಳ್ಳ..! ಮಲಗಿದ್ದ ಕಾನ್ಸ್ಟೇಬಲ್ ಸಮೇತ ಬಸ್ ಕಳವಿಗೆ ಯತ್ನ..! ಇಲ್ಲಿದೆ ಚಾಲಾಕಿ ಕಳ್ಳನ ಕಥೆ

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ವಿಶೇಷ ಪೂಜೆ

ಹೊಟ್ಟೆ ಹಸಿವು ತಾಳಲಾರದೆ ಅಕ್ಕಿ ಗೋದಾಮಿಗೆ ನುಗ್ಗಿದ ಕಾಡಾನೆ..! ಹೆದರಿಸಿದರೂ ಜಗ್ಗದೆ ಸೊಂಡಿಲಿನಿಂದ ಗೋದಾಮಿನ ಲಾಕ್ ಮುರಿದ ಗಜರಾಜ..! ವಿಡಿಯೋ ವೀಕ್ಷಿಸಿ