ಕರಾವಳಿ

ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಹಿನ್ನೆಲೆ, ಸಂಪಾಜೆ ಚೆಕ್‌ಪೋಸ್ಟ್‌ನಲ್ಲಿ ಫುಲ್ ರಶ್‌, ವಿಡಿಯೋ ನೋಡಿ..!

ನ್ಯೂಸ್ ನಾಟೌಟ್: ಮದೆನಾಡು ಸಮೀಪದ ಕರ್ತೊಜಿಯಲ್ಲಿ ಮರ ಸಹಿತ ಭೂಕುಸಿತವಾಗಿದ್ದು ಇದೀಗ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ.

ಇದೀಗ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ಸಂಪಾಜೆಯ ಗಡಿಕಲ್ಲು ತನಕ ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದು ಫುಲ್ ರಶ್ ಆಗಿದೆ.

ಸೋಮವಾರ ಸಂಜೆ 6.30 ಕ್ಕೆ ದೊಡ್ಡ ಮರವೊಂದು ಮದೆನಾಡಿನ ಕರ್ತೊಜಿ ಬಳಿ ಮುಖ್ಯ ರಸ್ತೆಗೆ ಮಣ್ಣು ಸಹಿತ ಕುಸಿದು ಬಿದ್ದಿದೆ. ಇದೀಗ ರಸ್ತೆಯ ಒಂದು ಬದಿಯ ಮಣ್ಣನ್ನು ತೆರವುಗೊಳಿಸಲು ಅಧಿಕಾರಿಗಳು ಹರಸಾಹಸ ಮಾಡುತ್ತಿದ್ದಾರೆ. ಜೆಸಿಬಿ -ಹಿಟಾಚಿ ಬಳಸಿ ಮಣ್ಣು ತೆರವಿನ ಕಾರ್ಯಾಚರಣೆ ನಡೆಸಲಾಗುತ್ತಿದೆ.

ರಸ್ತೆಯ ಎರಡೂ ಕಡೆಯಲ್ಲೂ ವಾಹನಗಳು ಸಂಚರಿಸಲಾಗದೆ ಅಲ್ಲಿ ನಿಂತಿವೆ. ಭಾರೀ ಮಳೆಯ ನಡುವೆಯೂ ಕಾರ್ಯಾಚರಣೆ ಮುಂದುವರಿದಿದೆ. ಸದ್ಯ ಮಡಿಕೇರಿಯಿಂದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಕೊಯನಾಡು ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಸ್ಥಳಕ್ಕೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.

Related posts

ಪುತ್ತೂರು:ಬಿಜೆಪಿ ನಾಯಕರ ವಿರುದ್ಧ ಬ್ಯಾನರ್, ಚಪ್ಪಲಿ ಹಾರ!,ಮುಗಿಲು ಮುಟ್ಟಿದ ಕಾರ್ಯಕರ್ತರ ಆಕ್ರೋಶ

ಪುತ್ತೂರು: ನಕಲಿ ದಾಖಲೆಗಳ ಸರದಾರ ಅರೆಸ್ಟ್‌..! ಸುಳ್ಯ, ಪುತ್ತೂರು ನಗರಸಭೆ ಸೇರಿದಂತೆ ವಿವಿಧ ಗ್ರಾಮ ಪಂಚಾಯತ್‌ಗಳ ನಕಲಿ ದಾಖಲೆಗಳು ವಶಕ್ಕೆ

ಕಡಬ ತಾಲೂಕು ಆಡಳಿತ ಸೌಧ ಲೋಕಾರ್ಪಣೆ