ಸುಳ್ಯ

ಲಯನ್ಸ್ ಕ್ಲಬ್: ಪ್ರಾಂತೀಯ ಅಧ್ಯಕ್ಷೆಯಾಗಿ ಲ| ಸಂಧ್ಯಾ ಆಯ್ಕೆ

607

ಸಂಪಾಜೆ: ಲಯನ್ಸ್  ಜಿಲ್ಲೆ 317ಡಿ ಪ್ರಾಂತ್ಯ 8ರ ಪ್ರಾಂತೀಯ ಅಧ್ಯಕ್ಷರಾಗಿ ಲ| ಸಂಧ್ಯಾ ಸಚಿತ್ ಕುಮಾರ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಏಪ್ರಿಲ್ 11ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆದ 14ನೇ ಜಿಲ್ಲಾ ಕನ್ವೆನ್ಸನ್ ನಲ್ಲಿ ಲಯನ್ಸ್  ಜಿಲ್ಲೆ 317ಡಿಯ  2022-23ರ ನೂತನ ರಾಜ್ಯಪಾಲರಾದ ಸಂಚಿತ್ ಶೆಟ್ಟಿರವರು ಲ| ಸಂದ್ಯಾ ಸಚಿತ್ ಕುಮಾರ್ ರವರನ್ನು ಪ್ರಾಂತ್ಯ 8ರ ಅಧ್ಯಕ್ಷರಾಗಿ ನೇಮಕಗೊಳಿಸಿದ್ದಾರೆ. ಸಂದ್ಯಾರವರು ಚೆಂಬು ಬಾಲಂಬಿ ಫಾರ್ಮ್ಸ್ ನ ಸಚಿತ್ ಕುಮಾರ್ ರವರ ಪತ್ನಿಯಾಗಿದ್ದು. ಪ್ರಸ್ತುತ ಕಡಬದ ಕೊಡಿಂಬಾಳದಲ್ಲಿ ಕುಟುಂಬ ಸಮೇತ ನೆಲೆಸಿರುತ್ತಾರೆ. ಸಂಪಾಜೆ ಲಯನ್ಸ್ ಕ್ಲಬಿನ ಸದಸ್ಯರಾಗಿದ್ದು, ಕ್ಲಬ್‌ನಲ್ಲಿ ಬೇರೆ ಬೇರೆ ಹುದ್ದೆಯನ್ನು ಅಲಂಕರಿಸಿದ್ದಾರೆ.  2020-21ರಲ್ಲಿ ಲಯನ್ಸ್ ಜಿಲ್ಲೆ 317ರ ವಲಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

See also  ಮರಕತ ಕಿಂಡಿ ಅಣೆಕಟ್ಟು ಸೇತುವೆ ಲೋಕಾರ್ಪಣೆಗೆ ಕ್ಷಣಗಣನೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget