ಕೊಡಗುಕ್ರೈಂ

ಕೊಯನಾಡು: ಕುಟುಂಬ ಸಹಿತ ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಚರಂಡಿಗೆ, ಮಕ್ಕಳು ಸೇರಿದಂತೆ ಐವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

ನ್ಯೂಸ್ ನಾಟೌಟ್: ಕುಟುಂಬ ಸಹಿತ ಪ್ರಯಾಣಿಸುತ್ತಿದ್ದ ಕಾರೊಂದು ಕೊಯನಾಡು ಫಾರೆಸ್ಟ್ ಆಫೀಸ್ ಸಮೀಪ ನಿಯಂತ್ರಣ ತಪ್ಪಿ ಚರಂಡಿಗೆ ಜಾರಿದ ಘಟನೆ ಇದೀಗ ನಡೆದಿದೆ.

ಅಕ್ಟೋಬರ್ 8 ರಂದು ಬೆಳಗ್ಗೆ ಘಟನೆ ನಡೆದಿದ್ದು ಕಾರು ಭಟ್ಕಳದಿಂದ ಮೈಸೂರು ಕಡೆಗೆ ಚಲಿಸುತ್ತಿತ್ತು. ಕೊಯನಾಡಿನ ಅರಣ್ಯ ಇಲಾಖೆ ಬಳಿ ಬರುತ್ತಿದ್ದಂತೆ ಕಾರು ಹಠಾತ್ ಚಾಲಕನ ನಿಯಂತ್ರಣ ತಪ್ಪಿ ಚರಂಡಿ ಯಲ್ಲಿ ಸುಮಾರು 30 ಮೀ. ತನಕ ಸಾಗಿದೆ. ಅದೃಷ್ಟವಶಾತ್ ಕಾರಿನಲ್ಲಿ ಮಕ್ಕಳು ಸೇರಿದಂತೆ ಐವರು ಪ್ರಯಾಣಿಕರು ಪವಾಡ ಸದೃಶವಾಗಿ ಪಾರಾಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ, ಸ್ಥಳೀಯರು ಪ್ರಯಾಣಿಕರನ್ನು ಕಾರಿನಿಂದ ಹೊರಗೆ ಬರಲು ತಕ್ಷಣ ಸ್ಪಂದಿಸಿದರು.

Related posts

ಪತ್ನಿಯ ಕಾಲುಗಳನ್ನು ಬೈಕ್‌ ಗೆ ಕಟ್ಟಿ ಎಳೆದೊಯ್ದ ಪತಿ..! ಮಹಿಳೆ ಕೂಗಿ ಕರೆದರೂ ಸಹಾಯಕ್ಕೆ ಬಾರದ ಜನ..!

ಯಾರೂ ವಾಸವಿಲ್ಲದ ಮನೆಯ ಫ್ರಿಡ್ಜ್ ​ನಲ್ಲಿ ಮಾನವನ ತಲೆಬುರುಡೆ, ಮೂಳೆಗಳು ಪತ್ತೆ..! 14 ಎಕರೆ ಜಾಗದಲ್ಲಿರುವ ಪಾಳು ಬಿದ್ದ ಮನೆ..!

ಬೆಳ್ತಂಗಡಿ: ನಿಯಂತ್ರಣ ತಪ್ಪಿ ಸೇತುವೆಯ ತಡೆಗೋಡೆಗೆ ಸರ್ಕಾರಿ ಬಸ್ ಢಿಕ್ಕಿ..! ಕೆ.ಎಸ್.ಆರ್.ಟಿ.ಸಿ ಚಾಲಕನ ವಿರುದ್ಧ ಪ್ರಯಾಣಿಕರ ಆಕ್ರೋಶ..!