ಕರಾವಳಿ

ಸಂಪಾಜೆಯಲ್ಲಿ ಸರಣಿ ಕಳ್ಳತನ, ಸಾರ್ವಜನಿಕರ ನಿದ್ದೆಗೆಡಿಸಿದ ಕಳ್ಳರ ಬಗ್ಗೆ ಪೊಲೀಸರೇಕೆ ಮೌನ?

234

ನ್ಯೂಸ್ ನಾಟೌಟ್: ಸಂಪಾಜೆಯಲ್ಲಿ ಕಳ್ಳತನ ಪ್ರಕರಣಗಳು ಕಳೆದ ಕೆಲವು ದಿನಗಳಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದ್ದು ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಿದೆ.

ಒಂದು ತಿಂಗಳ ಹಿಂದೆ ಸಂಪಾಜೆ ಹೈವೇ ಹೋಟೆಲ್ ಪಕ್ಕ ಸ್ಕೂಟರ್ ಕಳ್ಳತನವಾಗಿತ್ತು. ಇದಾದ ಬೆನ್ನಲ್ಲೇ ಕಲ್ಲುಗುಂಡಿಯ ಸಂಗಮ್ ಬಳಿ ನಿಲ್ಲಿಸಿದ ಬೈಕ್ ಕಳವಾಗಿತ್ತು. ನಿಲ್ಲಿಸಿದ ಕೆಲವು ವಾಹನಗಳಿಂದ ಇಂಧನ ಕಳ್ಳತನವಾಗಿರುವ ಬಗ್ಗೆ ವರದಿಯಾಗಿದೆ. ಅಲ್ಲದೆ ವಾಹನದ ಬ್ಯಾಟರಿಗಳನ್ನು ಕೂಡ ಕದಿಯುತ್ತಿರುವುದು ದೊಡ್ಡ ತಲೆನೋವಿಗೆ ಕಾರಣವಾಗಿದೆ. ಇತ್ತೀಚಿಗೆ ವ್ಯಕ್ತಿಯೊಬ್ಬ ಕಲ್ಲುಗುಂಡಿಯ ಮಲ್ಲಿಕಾ ಎಂಟರ್‌ಪ್ರೈಸಸ್ ನಿಂದ ಸುಮಾರು ಐವತ್ತಕ್ಕೂ ಹೆಚ್ಚು ಹಂಚುಗಳನ್ನು ಬೆಳ್ಳಂ ಬೆಳಗ್ಗೆ ಕದ್ದು ಪರಾರಿಯಾಗಿದ್ದ. ಈ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಇಷ್ಟೆಲ್ಲ ಸರಣಿ ಕಳ್ಳತನವಾದರೂ ಕಲ್ಲುಗುಂಡಿ ಪೊಲೀಸರು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಕೂಡಲೇ ಕಳ್ಳರನ್ನು ಹಿಡಿದು ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

See also  ಕಲ್ಲುಗುಂಡಿ: ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget