ಕರಾವಳಿಕೊಡಗುಪುತ್ತೂರುಸುಳ್ಯ

ಸಂಪಾಜೆ- ಕಲ್ಲುಗುಂಡಿ: ಪಯಸ್ವಿನಿ ನದಿ ಹೂಳೆತ್ತುವ ಸಮೀಕ್ಷೆ ಆರಂಭ

ನ್ಯೂಸ್ ನಾಟೌಟ್: ಕಳೆದ ವರ್ಷ ಎದುರಾಗಿದ್ದ ಭಾರಿ ಪ್ರವಾಹದಲ್ಲಿ ಕಲ್ಲು ಗುಂಡಿ- ಸಂಪಾಜೆ ಗ್ರಾಮದಲ್ಲಿ ಅಪಾರ ನಷ್ಟ ಸಂಭವಿಸಿತ್ತು. ಭಾರಿ ಪ್ರವಾಹದಿಂದಾಗಿ ಸಂಪಾಜೆಯ ಚೌಕಿ ಭಾಗದಿಂದ ಕಲ್ಲುಗುಂಡಿಯ ತನಕ ಪಯಸ್ವಿನಿ ಯಲ್ಲಿ ಹೂಳು ತುಂಬಿಕೊಂಡಿತ್ತು. ಇದೀಗ ಹೂಳೆತ್ತುವ ನಿಟ್ಟಿನಲ್ಲಿ ಗಣಿ ಇಲಾಖೆಯಿಂದ ನದಿಯಲ್ಲಿ ತುಂಬಿರುವ ಹೂಳಿನ‌ ಸಮೀಕ್ಷೆ ಆರಂಭವಾಗಿದೆ ಎಂದು ತಿಳಿದು ಬಂದಿದೆ.

ಈ ಹೂಳು ಎತ್ತಿಸದಿದ್ದರೆ ಈ ಸಲವೂ ಮಳೆಗಾಲದಲ್ಲಿ ಸಂಪಾಜೆ ಗ್ರಾಮಕ್ಕೆ ಅಪಾರ‌ ನಷ್ಟ ಸಂಭವಿಸುವ ಆತಂಕ ಎದುರಾಗಿತ್ತು. ಈ ಬಗ್ಗೆ ನ್ಯೂಸ್ ನಾಟೌಟ್ ಜನಪರ ಧ್ವನಿಯಾಗಿ ಸಮಗ್ರ ವರದಿ ಮಾಡಿತ್ತು. ಈ ಬೆನ್ನಲ್ಲೇ ಒಂದಷ್ಟು ಚುರುಕಿನ ಕಾರ್ಯಾಚರಣೆ ಆ ಭಾಗದಲ್ಲಿ ಆರಂಭವಾಗಿತ್ತು. ಇದೀಗ ಗಣಿ ಇಲಾಖೆಯಿಂದ ಸಮೀಕ್ಷೆ ಆರಂಭವಾಗಿದೆ ಎಂದು ತಿಳಿದು ಬಂದಿದೆ. ಡ್ರೋನ್ ಬಳಸಿ ಪಯಸ್ವಿನಿ ನದಿಯಲ್ಲಿ ತುಂಬಿರುವ ಹೂಳಿನ‌ ಸಮೀಕ್ಷೆ ನಡೆಸಲಾಗುತ್ತಿದೆ.

Related posts

ಉಡುಪಿ: ರಸ್ತೆ ಬದಿ ನಿಂತಿದ್ದ ಲಾರಿಗೆ ಹಿಂದಿನಿಂದ ಗುದ್ದಿದ ಮಿನಿ ಬಸ್..! ಕೊಲ್ಲೂರು ದೇವಾಲಯಕ್ಕೆ ಹೋಗುತ್ತಿದ್ದ 17 ಮಂದಿ ಆಸ್ಪತ್ರೆಗೆ ದಾಖಲು..!

ಬಂಟ್ವಾಳ : ಗಾಂಜಾ ಸಾಗಾಟ:ಇಬ್ಬರು ಆರೋಪಿಗಳು ಅರೆಸ್ಟ್

ಕೊಡಗು: ಹಲವೆಡೆ ಭೂಮಿಗೆ ತಂಪೆರೆದ ಮಳೆ