ಕೊಡಗುಸುಳ್ಯ

ಸಂಪಾಜೆ: ಹಾಸ್ಟೇಲ್ ನಲ್ಲಿ ಬಾಲಕನ ಮರ್ಮಾಂಗ ಹಿಡಿದೆಳೆದ ಪ್ರಕರಣ, ಅಡುಗೆ ಸಿಬ್ಬಂದಿ ಅಮಾನತು

76
Spread the love

ನ್ಯೂಸ್ ನಾಟೌಟ್: ಕೊಡಗು ಸಂಪಾಜೆಯ ಹಾಸ್ಟೇಲ್ ನಲ್ಲಿ ದಲಿತ ಸಮುದಾಯಕ್ಕೆ ಸೇರಿದ ಬಾಲಕನ ಮರ್ಮಾಂಗ ಹಿಡಿದೆಳೆದು ಸಹಪಾಠಿಗಳು ಗಂಭೀರ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಡುಗೆ ಕೆಲಸದಾಕೆಯನ್ನು ಅಮಾನತು ಮಾಡಿರುವುದಾಗಿ ತಿಳಿದು ಬಂದಿದೆ.

ಇತ್ತೀಚೆಗೆ ಬಾಲಕನ ಮರ್ಮಾಂಗ ಹಿಡಿದೆಳೆದು ಹಾಸ್ಟೇಲ್ ಗೆಳೆಯರು ಗಂಭೀರ ಗಾಯಗೊಳಿಸಿದ್ದರು. ಗಾಯದ ಪರಿಣಾಮ ಬಾಲಕನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಕಲಿಕೆಯ ಹಂತದಲ್ಲಿರುವ ಮಕ್ಕಳ ವಿಕೃತ ನಡವಳಿಕೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ಕೇಳಿ ಬಂದಿತ್ತು. ವಾರ್ಡನ್ ಅಮಾನತು ಮಾಡುವಂತೆ ಒತ್ತಾಯ ಕೇಳಿ ಬಂದಿತ್ತು. ಇದೀಗ ಕೊಡಗು ಸಂಪಾಜೆಯಲ್ಲಿದ್ದ ವಾರ್ಡನ್ ಅನ್ನು ವರ್ಗಾವಣೆ ಮಾಡಲಾಗಿತ್ತು. ಅವರ ಬದಲಿಗೆ ಹೊಸ ವಾರ್ಡನ್ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಘಟನೆಗೆ ಸಂಬಂಧಪಟ್ಟಂತೆ ಹಾಸ್ಟೇಲ್ ಅಡುಗೆ ಕೆಲಸದಾಕೆಯನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.

See also  ರಸ್ತೆ ಬದಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಜ್ಜ..! ಸೂಕ್ತ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ವೈದ್ಯರು,ಸ್ಥಳೀಯರು..!ಚೇತರಿಸಿಕೊಂಡ ವೃದ್ದ ಕೊಟ್ಟ ಉಡುಗೊರೆ ಏನು ಗೊತ್ತಾ?
  Ad Widget   Ad Widget   Ad Widget   Ad Widget   Ad Widget   Ad Widget