ಕರಾವಳಿ

6 ವರ್ಷ ಕಾಂಗ್ರೆಸ್ ನಿಂದ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಅಮಾನತು?

ನ್ಯೂಸ್ ನಾಟೌಟ್: ಸಂಪಾಜೆ ಗ್ರಾಮ ಪಂಚಾಯತ್ ಒಳಗಿನ ಕಿಡಿ ಮತ್ತೆ ಹೊತ್ತಿಕೊಂಡಿದೆ. ಒಂದು ಕಡೆಯಿಂದ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್ ಅವರು ಶಿಸ್ತನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪದಡಿಯಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷ ಜಿ.ಕೆ. ಹಮೀದ್ ಅವರನ್ನು ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಿ ಪ್ರಕಟಣೆ ಹೊರಡಿಸಿದ್ದಾರೆ. ಆದರೆ ಜಿಕೆ ಹಮೀದ್ ಅವರು ನ್ಯೂಸ್ ನಾಟೌಟ್ ಗೆ ಪ್ರತಿಕ್ರಿಯಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಿಗೆ ನನ್ನನ್ನು ಉಚ್ಛಾಟಿಸುವ ಅಧಿಕಾರ ಇಲ್ಲ ಎಂದಿದ್ದಾರೆ. ಈ ಮೂಲಕ ಹಮೀದ್ ಮತ್ತೊಮ್ಮೆ ಸೆಡ್ಡು ಹೊಡೆದು ನಿಂತಿದ್ದಾರೆ.

ಕಳೆದ ಕೆಲವು ದಿನಗಳಿಂದ ಸಂಪಾಜೆ ಗ್ರಾಮ ಪಂಚಾಯತ್ ಹೊತ್ತಿ ಉರಿಯುತ್ತಿದೆ. ಗ್ರಾಮ ಪಂಚಾಯತ್ ಅಧ್ಯಕ್ಷ ಕುರ್ಚಿಯನ್ನು ಬಿಟ್ಟು ಕೊಡುವ ವಿಚಾರದಲ್ಲಿ ಜಿಕೆ ಹಮೀದ್ ಮತ್ತು ಕಾಂಗ್ರೆಸ್ ನಾಯಕ ಸೋಮಶೇಖರ್ ಕೊಯಿಂಗಾಜೆ ನಡುವೆ ಕೋಲ್ಡ್ ವಾರ್ ಶುರುವಾಗಿತ್ತು. ಸವಾದ್ ಗೂನಡ್ಕ ಇವರಿಗೆ ಅಧ್ಯಕ್ಷ ಪಟ್ಟವನ್ನು ನೀಡುವಂತೆ ಸೋಮಶೇಖರ್ ಸೂಚನೆ ನೀಡಿದ್ದರು. ಆದರೆ ಹಮೀದ್ ಬಿಟ್ಟುಕೊಟ್ಟಿರಲಿಲ್ಲ. ಇದೇ ವಿಚಾರ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಮೆಟ್ಟಿಲೇರಿತ್ತು. ಇದೀಗ ಶಿಸ್ತು ಕ್ರಮದ ಆದೇಶವನ್ನು ಹೊರಡಿಸಲಾಗಿದೆ.

ಇತ್ತ ತನ್ನ ಉಚ್ಛಾಟನೆ ಸುದ್ದಿ ತಿಳಿಯುತ್ತಿದ್ದಂತೆ ಹಮೀದ್ ನ್ಯೂಸ್ ನಾಟೌಟ್ ಗೆ ಪ್ರತಿಕ್ರಿಯಿಸಿ ಇದೊಂದು ಅಸಿಂಧು ಪ್ರಕಟಣೆಯಾಗಿದೆ. ನನ್ನನ್ನು ಗ್ರಾಮ ಮಟ್ಟದ ಕಾಂಗ್ರೆಸ್ ನಿಂದ ಉಚ್ಛಾಟನೆ ಮಾಡಿರುವುದನ್ನು ಮೊನ್ನೆ ಪತ್ರಿಕೆ ಓದಿ ತಿಳಿಯಿತು. ಆದರೆ ಇದುವರೆಗೆ ಇಲ್ಲಿನವರು ನನಗೆ ನೋಟಿಸ್ ನೀಡಿಲ್ಲ. ಈಗ ತಾಲೂಕು ಕಾಂಗ್ರೆಸ್ ನಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್ ಅವರು ನನ್ನನ್ನು ಉಚ್ಛಾಟಿಸಿ ಪ್ರಕಟಣೆ ಹೊರಡಿಸಿದ್ದಾರೆ. ನಾನು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷನಾಗಿದ್ದೇನೆ. ನನ್ನನ್ನು ಪಿಸಿ ಜಯರಾಮ್ ಅವರಿಗೆ ಪಕ್ಷದಿಂದ ಉಚ್ಛಾಟಿಸಲು ಅಧಿಕಾರ ಇರುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಯಾವುದೇ ಪಕ್ಷ ಬರುವುದಿಲ್ಲ. ಇದು ಪಕ್ಷಾತೀತ ಚುನಾವಣೆ ಆಗಿರುವುದರಿಂದ ಇಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಿಗೆ ನನ್ನನ್ನು ಉಚ್ಛಾಟಿಸುವ ಅಧಿಕಾರ ಇರುವುದಿಲ್ಲ ಎಂದು ಹಮೀದ್ ತಿರುಗೇಟು ನೀಡಿದ್ದಾರೆ.

Related posts

ಮನೆಯ ಹಂಚು ತೆಗೆದು ಬೆಡ್‌ರೂಂ ಗೆ ನುಗ್ಗಿ ಲೈಂಗಿಕ ಕಿರುಕುಳ..!,ಮಹಿಳೆ ಕಿರುಚುವ ವೇಳೆ ಕಾಮುಕ ಸ್ಥಳದಿಂದ ಪರಾರಿ..!ಆ ಒಂದು ವಸ್ತುವಿನಿಂದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದರು..ಆ ವಸ್ತು ಯಾವುದು?

Air India: 60 ವರ್ಷಗಳ ಇತಿಹಾಸವಿರುವ ಭಾರತೀಯ ಸಾಂಪ್ರದಾಯಿಕ ಉಡುಪು ಸೀರೆಗೆ ಕೊಕ್ ಕೊಟ್ಟ ಏರ್‌ ಇಂಡಿಯಾ..! ಸೀರೆ ಬೇಡವೆಂದು ಹೇಳಿದ್ಯಾಕೆ ಸಂಸ್ಥೆ..?

ಸುಳ್ಯ: ಓಡಬಾಯಿಯಿಂದ ಬೈಕ್ ಕಳವಾದ ಪ್ರಕರಣಕ್ಕೆ ಟ್ವಿಸ್ಟ್,ಜ್ಯೋತಿ ಸರ್ಕಲ್ ನಲ್ಲಿ ಬೈಕ್ ಪತ್ತೆ!,ಓಡಬಾಯಿಯಿಂದ ಜ್ಯೋತಿಸರ್ಕಲ್ ಗೆ ಬೈಕ್ ತಂದಿಟ್ಟವರಾರು?!