ಕರಾವಳಿ

ಸಂಪಾಜೆ: 29 ಫಲಾನುಭವಿಗಳಿಗೆ ಮನೆ ಮಂಜೂರಾತಿ ಪತ್ರ ವಿತರಣೆ

440

ನ್ಯೂಸ್ ನಾಟೌಟ್: ಸಂಪಾಜೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ಅಧ್ಯಕ್ಷತೆಯಲ್ಲಿ 29 ಜನ ಪಲಾನುಭವಿಗಳಿಗೆ ಮನೆ ಮಂಜೂರಾತಿ ಆದೇಶ ಪತ್ರ ವಿತರಣೆ ,6 ಜನ ಅಂಗವಿಕಲರಿಗೆ ಗೋದ್ರೇಜ್, ಒಬ್ಬರಿಗೆ ಮಂಚ ವಿತರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಕಲ್ಲುಗುಂಡಿ ಆರ್.ಎಮ್.ಎಸ್. ಎ. ಪ್ರೌಢಶಾಲೆ ಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಕ್ಷಾ ರವರಿಗೆ ಸನ್ಮಾನ ಮಾಡಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷತೆ ವಹಿಸಿ ಜಿ. ಕೆ.ಹಮೀದ್ ಮಾತನಾಡಿ ಗ್ರಾಮದ ಸಮಗ್ರ ಕುಡಿಯುವ ನೀರಿನ ವ್ಯವಸ್ಥೆಗೆ ಯೋಜನೆ ರೂಪಿಸಲಾಗಿದ್ದು ಮನೆ ಮನೆಗೆ ಕುಡಿಯುವ ನೀರು ತಲುಪಿಸಲು ವ್ಯವಸ್ಥೆ ರೂಪಿಸಲಾಗಿದೆ ಎಂದರು. ಹಕ್ಕು ಪತ್ರ ಪಡೆದ ಫಲಾನುಭವಿಗಳು ಸೂಕ್ತ ರೀತಿಯಲ್ಲಿ ಮನೆ ನಿರ್ಮಾಣ ಮಾಡಿ ಎಂದರು. ಮಾಜಿ ಅಧ್ಯಕ್ಷೆ ಸುಂದರಿ ಮುಂಡಡ್ಕ, ಜಗದೀಶ್ ರೈ, ಎಸ್. ಕೆ. ಹನೀಫ್, ಸವಾದ್, ಅನುಪಮಾ, ವಿಮಲಾ ಪ್ರಸಾದ್, ವಿಜಯ ಅಲಡ್ಕ, ಸುಮತಿ ಶಕ್ತಿವೇಲು ಉಪಸ್ಥಿತರಿದ್ದರು.

See also  ಮಾಜಿ ಸಿಎಂ ಸದಾನಂದ ಗೌಡರ ಮಧ್ಯಸ್ಥಿಕೆ, ಕೊನೆಗೂ ದಕ್ಷಿಣ ಕನ್ನಡ ಜಿಲ್ಲಾ ಗೌಡ ಸಂಘಗಳ ಮುನಿಸು ಅಂತ್ಯ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget