ಕೊಡಗುಕ್ರೈಂಸುಳ್ಯ

ಸಂಪಾಜೆ: ಕಲ್ಲುಗುಂಡಿಯ ಬಂಗ್ಲೆಗುಡ್ಡೆಯಲ್ಲಿ ಬೆಂಕಿ ಅವಘಡ, ಧಗಧಗನೆ ಹೊತ್ತಿ ಉರಿದ ಸಸ್ಯ ಸಂಪತ್ತು

87
Spread the love

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಗ್ರಾನದ ಕಲ್ಲುಗುಂಡಿಯ ಬಂಗ್ಲೆಗುಡ್ಡೆ ಎಂಬಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಆಕಸ್ಮಿಕವಾಗಿ ಕಾಡಿಗೆ ಹಬ್ಬಿಕೊಂಡ ಬೆಂಕಿ ಕೆನ್ನಾಲಿಗೆಯನ್ನು ಚಾಚುತ್ತ ಬಿದಿರಿನ ಹಿಂಡು ಸಹಿತ ಹಲವು ಸಸಿಗಳನ್ನು ಸುಟ್ಟು ಹಾಕಿದೆ.

ಸದ್ಯ ಭಾರಿ ಬಿಸಿಲು ಇರುವುದರಿಂದ ಈ ಘಟನೆ ಸಂಭವಿಸರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜೆ.ಕೆ. ಹಮೀದ್ ಸೇರಿದಂತೆ ಹಲವಾರು ಮಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆಂದು ತಿಳಿದು ಬಂದಿದೆ.

See also  Prajwal Revanna: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ: ಸಚಿವ ಜಮೀರ್ ಆಪ್ತನ ಬಂಧನ..! ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget   Ad Widget   Ad Widget   Ad Widget