ನ್ಯೂಸ್ ನಾಟೌಟ್: ಸಂಪಾಜೆ ಕೆಫೆ ಬಳಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದಾರೆ ಎನ್ನಲಾದ ಮಿನಿ ಲಾರಿಯನ್ನು ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ಊರವರು ಸೇರಿಕೊಂಡು ಇದೀಗ ಸಂಜೆ ಹಿಡಿದಿದ್ದಾರೆ.
ಯಾವುದೇ ಪರವಾನಗಿ ಇಲ್ಲದೆ ಮೈಸೂರಿಗೆ ಗೋವುಗಳನ್ನು ಸಾಗಿಸಲಾಗುತ್ತಿತ್ತು ಎನ್ನುವ ಪ್ರಾಥಮಿಕ ಮಾಹಿತಿ ಲಭಿಸಿದೆ. ಸದ್ಯ ಸ್ಥಳದಲ್ಲಿ ಮಿನಿ ಲಾರಿಯನ್ನು ತಡೆದು ಅದರಲ್ಲಿದ್ದವರನ್ನು ವಿಚಾರಣೆ ನಡೆಸಲಾಗುತ್ತಿದೆ. ಸ್ಥಳಕ್ಕೆ ಇನ್ನಷ್ಟೇ ಪೊಲೀಸರು ಆಗಮಿಸಬೇಕಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.