ಕರಾವಳಿಕೊಡಗುಸುಳ್ಯ

ಸಂಪಾಜೆ :ತಡರಾತ್ರಿ ಹೊಟೇಲ್‌ವೊಂದಕ್ಕೆ ನುಗ್ಗಿ ಕಳ್ಳತನಕ್ಕೆ ಯತ್ನ,ಪೊಲೀಸರು ಸ್ಥಳಕ್ಕಾಗಮಿಸುತ್ತಿದ್ದಂತೆ ಕಳ್ಳರು ಎಸ್ಕೇಪ್ ..!

ನ್ಯೂಸ್ ನಾಟೌಟ್ : ಇತ್ತೀಚೆಗೆ ಸುಳ್ಯದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ.ಸುಳ್ಯ ನಗರ ಸೇರಿದಂತೆ ನಗರದ ಆಸುಪಾಸಿನಲ್ಲಿ ಕಳ್ಳರ ಹಾವಳಿ ಜಾಸ್ತಿಯಾಗಿದ್ದು,ಅಲ್ಲಲ್ಲಿ ಕಳವು ಆಗಿರೋದರ ಬಗ್ಗೆ ವರದಿಯಾಗಿದೆ.ಇದೀಗ ಸುಳ್ಯ ತಾಲೂಕಿನ ಸಂಪಾಜೆಯಲ್ಲೂ ತಡ ರಾತ್ರಿ(04.08) ವೇಳೆ ಹೊಟೇಲ್‌ವೊಂದಕ್ಕೆ ಕಳ್ಳರು ನುಗ್ಗಿರುವ ಘಟನೆ ವರದಿಯಾಗಿದೆ.

ಸಂಪಾಜೆ ಚೆಕ್ ಪೋಸ್ಟ್ ಬಳಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು,ಚೆಕ್ ಪೋಸ್ಟ್ ಬಳಿ ಇರುವ ಹೊಟೇಲ್ ಸ್ವಾಗತ್ ಗೆ ಕಳ್ಳರು ನುಗ್ಗಿ ಕೈಚಳಕ ತೋರಲು ಪ್ರಯತ್ನ ಪಟ್ಟಿದ್ದಾರೆ. ಹೊಟೇಲ್ ಮಾಲೀಕ ಚೆನ್ನಪ್ಪ ಅನಾರೋಗ್ಯದಿಂದ ಒಂದು ವಾರಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಯಾರು ಇಲ್ಲದ ಸಂದರ್ಭದಲ್ಲಿ ಹಿಂಬದಿ ಬಾಗಿಲಿನಿಂದ ಬೀಗ ಒಡೆದು ಕಳ್ಳರು ನುಗ್ಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ವೇಳೆ ಶಬ್ಧ ಕೇಳಿದ ಪಕ್ಕದ ಮನೆಯವರು ಇದೇನು ಹೆಜ್ಜೆ ಸಪ್ಪಳ ಕೇಳಿಸ್ತಿದೆ.ಭಾರಿ ಸದ್ದು ಕೇಳಿಸ್ತಿದೆ ಎನ್ನುತ್ತಾ ತಕ್ಷಣ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ.ಕೂಡಲೇ ಎಚ್ಚೆತ್ತುಕೊಂಡ ಕೊಡಗು-ಸಂಪಾಜೆ ಪೊಲೀಸರು ಮತ್ತು ಸ್ಥಳೀಯ ನಿವಾಸಿ ರಿತಿನ್ ಡೆಮ್ಮಾಲೆ , ಜೊರಾಯಿದು ಪೇರಡ್ಕ,ಸಿಯ ಸ್ಥಳಕ್ಕೆ ಧಾವಿಸಿದರು.ಆದರೆ ಅವರು ಬರುವುದರೊಳಗೆ ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸ್ಥಳೀಯರು ಮಾಹಿತಿ ನೀಡಿದ ಪ್ರಕಾರ “ಹೊಟೇಲ್ ಗೆ ನುಗ್ಗಿದ ಕಳ್ಳರು ಗೋದ್ರೇಜ್ ಬೀಗ ಒಡೆದಿದ್ದಾರೆ.ಹೊಟೇಲ್ ಮಾಲೀಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋದ್ರಿಂದ ಹೊಟೇಲ್‌ಗೆ ಈ ಟೈಮ್‌ನಲ್ಲಿ ಯಾರು ಬಂದಿರಬಹುದು ಎನ್ನುವ ಸಂಶಯ ಮೂಡಿತ್ತು.ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ.ಇನ್ನು ಹೊಟೇಲ್‌ ನಲ್ಲಿ ಕಳವಾಗಿದೆಯೋ, ಇಲ್ಲವೋ ಅನ್ನೋದನ್ನ ಮಾಲೀಕರೇ ಸ್ಥಳಕ್ಕೆ ಬಂದು ಹೇಳಬೇಕಾಗಿದೆ” ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

Related posts

ಮಡಿಕೇರಿ: ಸಂಕಷ್ಟದಲ್ಲಿ ಸಿಲುಕಿದ ಅಯ್ಯಪ್ಪ ಭಕ್ತರಿಗೆ ಮಸೀದಿಯಲ್ಲಿ ಆಸರೆ, ಸೌಹಾರ್ದತೆಗೆ ಸಾಕ್ಷಿಯಾದ ತಿತಿಮತಿ ಮಸೀದಿ..!

‘ಅಣ್ಣ ನೀನು, ತಂಗಿ ನಾನು’, ಅಂಜಲಿ ಮೊಂಟೆಸ್ಸರಿ ಸ್ಕೂಲ್ ಮಕ್ಕಳಿಗೆ ಖುಷಿಯೋ ಖುಷಿ

ವಿದೇಶದಲ್ಲಿ ಪಂಜುರ್ಲಿ ದೈವದ ಕಥೆಯ ಚಿತ್ರೀಕರಣ..​!ಡಿವೈನ್ ಸ್ಟಾರ್‌ ಅಭಿನಯದ ಕಾಂತಾರ ಪ್ರೀಕ್ವೆಲ್‌ಗೆ ಮುಹೂರ್ತ ಯಾವಾಗ?