ಕ್ರೈಂ

ಸಂಪಾಜೆ: ಕೆಎಸ್ಆರ್ ಟಿಸಿ ಬಸ್ ಅಪಘಾತ, ನಾಲ್ವರು ಗಂಭೀರ

687

ಸಂಪಾಜೆ: ಇಲ್ಲಿನ ಗಡಿಕಲ್ಲು ಸಮೀಪ ನಡೆದ ಕೆಎಸ್ಆರ್ ಟಿಸಿ ಬಸ್ ಅಪಘಾತದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಹೆಚ್ಚಿನ ಚಿಕಿತ್ಸೆಗೆ ಸಂಪಾಜೆ ಪ್ರಾಥಮಿಕ ಕೇಂದ್ರದಿಂದ ಸುಳ್ಯಕ್ಕೆ ರವಾನಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಐದಕ್ಕೂ ಹೆಚ್ಚು ಆಂಬ್ಯುಲೆನ್ಸ್ ಗಳು ಸಂಪಾಜೆಯಿಂದ ಸುಳ್ಯದ ಕಡೆಗೆ ಹೊರಟಿದೆ. ಸಣ್ಣಪುಟ್ಟ ಗಾಯಕ್ಕೆ ಒಳಗಾದವರನ್ನು ಸಂಪಾಜೆಯಲ್ಲಿಯೇ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಗಡಿಕಲ್ಲಿನ ಸಮೀಪ ಮಂಗಳೂರಿನಿಂದ ಮಡಿಕೇರಿ ಕಡೆಗೆ ಸಾಗುತ್ತಿದ್ದ ಬಸ್ ನ ಎಡಬದಿಯ ಮುಂದಿನ ಟಯರ್ ಒಡೆದು ಹೊಳೆಗೆ ಉರುಳಿ ಬಿದ್ದಿದೆ. ಬಸ್ ನಲ್ಲಿದ್ದ ಹಲವು ಜನರಿಗೆ ಗಂಭೀರವಾದ ಗಾಯಗಳಾಗಿವೆ. ಹೆಚ್ಚಿನವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

See also  ಕಾಫಿನಾಡಲ್ಲಿ ಭೀಕರ ಸರಣಿ ಅಪಘಾತ ! ದಂಪತಿ ದುರಂತ ಅಂತ್ಯ, 1 ವರ್ಷದ ಮಗು ಅನಾಥ!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget