ಕರಾವಳಿ

ಸಂಪಾಜೆ: ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿರುವ ಪುಟ್ಟ ಕಂದಮ್ಮಳ ಚಿಕಿತ್ಸೆಗೆ ಬೇಕಿದೆ ಸಹಾಯಹಸ್ತ!

ನ್ಯೂಸ್ ನಾಟೌಟ್: ಎರಡು ವರ್ಷದ ಪುಟ್ಟ ಕಂದಮ್ಮ ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಮಗುವಿನ ಚಿಕಿತ್ಸೆಗೆ ಹಣದ ಕೊರತೆ ಎದುರಾಗಿದ್ದು ಕುಟುಂಬಸ್ಥರು ಸಹಾಯ ಹಸ್ತಕ್ಕೆ ಕೈ ಚಾಚಿದ್ದಾರೆ.

ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕಡೆಪಾಲ ನಿವಾಸಿ ಶಿವ ಪ್ರಸಾದ್, ಭವಾನಿ ದಂಪತಿ ಪುತ್ರಿ ಜನನಿಗೆ ಕೇವಲ ಎರಡು ವರ್ಷ. ಇನ್ನೇನು ಪುಟ್ಟ ಪುಟ್ಟ ಹೆಜ್ಜೆ ಹಾಕಿ ಬಾಳಿ ಬದುಕಬೇಕಾದ ಮಗು ಭೀಕರ ಕಾಯಿಲೆಗೆ ತುತ್ತಾಗಿದ್ದಾಳೆ. ಈಕೆಗೆ ರಕ್ತ ಕ್ಯಾನ್ಸರ್ ಇದೆ ಎಂದು ಕೆಎಮ್‌ಸಿ ಅತ್ತಾವರದ ವೈದ್ಯರಾದ ಡಾ.ಹರಿಪ್ರಸಾದ್ ತಿಳಿಸಿದ್ದರು. ಎಲ್ಲಾ ಮಕ್ಕಳಂತೆ ಮಗು ಆರೋಗ್ಯವಾಗಿ ಬೆಳೆಯಬೇಕು ಎಂದರೆ ಮಗುವಿನ ಚಿಕಿತ್ಸೆಗೆ ಐದು ಲಕ್ಷ ರೂ. ವೆಚ್ಚ ತಗುಲುತ್ತದೆ ಎಂದು ತಿಳಿಸಿದ್ದಾರೆ.

ಮಗುವಿನ ತಂದೆ ತಾಯಿ ಕಷ್ಟ ಪಟ್ಟು ಜೀವನ ಸಾಗಿಸುವುದರಿಂದ ೫ ಲಕ್ಷ ರೂ. ವ್ಯಯಿಸಿ ಮಗುವಿಗೆ ಚಿಕಿತ್ಸೆ ಕೊಡಿಸಲಾಧ್ಯ. ಆದ್ದರಿಂದ ಸಹೃದಯಿ ದಾನಿಗಳು ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಬಡ ಕುಟುಂಬದ ಕಣ್ಣೀರು ಒರೆಸಿ, ಪುಟ್ಟ ಕಂದಮ್ಮನ ಜೀವ ಉಳಿಸುವುದಕ್ಕೆ ಸಹಾಯ ಮಾಡಬೇಕಾಗಿದೆ. ದಾನಿಗಳು 7892838206 ಈ ನಂಬರಿಗೆ ನಿಮ್ಮ ಕೈಲಾದಷ್ಟು ಹಣವನ್ನು ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಕಳುಹಿಸಬಹುದು. ಬ್ಯಾಂಕ್ ಖಾತೆಯಾದರೆ CANARA Bank/Account number 0643101045628 ಬ್ಯಾಂಕ್ ನಂಬರ್‌ಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 7892838206, 7624846642 ನಂಬರನ್ನು ಸಂಪರ್ಕಿಸಿ.

Related posts

ಅಮೆರಿಕದ ಟೆಕ್ಸಾಸ್‌ನಲ್ಲಿ ಗುಂಡಿನ ದಾಳಿ: ಮಗು ಸೇರಿದಂತೆ ಎಂಟು ಮಂದಿ ಸಾವು

ಫಾಜಿಲ್ ಹತ್ಯೆ ಪ್ರಕರಣ: ನಾಲ್ವರು ವಶಕ್ಕೆ, ಅರೆಸ್ಟ್ ಆಗೋ ಸಾಧ್ಯತೆ

ಪತ್ರಕರ್ತರಿಗೆ ಕಾರ್ಮಿಕ ಇಲಾಖೆಯಿಂದ ಆಹಾರ ಕಿಟ್ ವಿತರಣೆ, ಆತ್ಮಸ್ಥೈರ್ಯ ತುಂಬಲು ಸಹಕಾರಿ: ಶಾಸಕ ವೇದವ್ಯಾಸ ಕಾಮತ್